Vehicle Tire Burst : ಟೈರ್ ಸಿಡಿದು ವಾಹನ ಪಲ್ಟಿ, ಐವರ ಸಾವು

ವಾಹನವು ಕುಂಭಾರ್ಲಿ ಗ್ರಾಮವನ್ನು ಸಮೀಪಿಸುತ್ತಿದ್ದಾಗ ಬಲಭಾಗದ ಟೈರ್ ಇದ್ದಕ್ಕಿದ್ದಂತೆ ಸಿಡಿದು, ಸ್ಫೋಟಗೊಂಡ ರಭಸಕ್ಕೆ ಪಲ್ಟಿಯಾಗಿದೆ ಎಂದು ಸಹಾಯಕ ನಿರೀಕ್ಷಕ ಅತುಲ್ ಭೋಸಲೆ ತಿಳಿಸಿದ್ದಾರೆ.

  • ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಟೈರ್ ಸಿಡಿದು ವಾಹನ ಪಲ್ಟಿ, ಐವರ ಸಾವು; ಏಳು ಮಂದಿ ಗಾಯಗೊಂಡಿದ್ದಾರೆ
  • ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸೊಲ್ಲಾಪುರ (Tragic accident in Maharashtra): ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. (ಟೈರ್) ಟಯರ್ ಸಿಡಿದು ವಾಹನ ಪಲ್ಟಿಯಾಗಿ ಐವರು ಮೃತಪಟ್ಟಿದ್ದಾರೆ (Vehicle overturns due to tire burst) . ಇಲ್ಲಿ ವಾಹನವೊಂದರ ಟಯರ್ ಏಕಾಏಕಿ ಸಿಡಿದ ಪರಿಣಾಮ ವಾಹನ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ (five killed; seven injured). ಅಕ್ಕಲಕೋಟ-ಸೋಲಾಪುರ ಹೆದ್ದಾರಿಯ ಕುಂಬಾರ್ಲಿ ಗ್ರಾಮದ ಬಳಿ ಬೆಳಗ್ಗೆ 10.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಕಲಕೋಟ-ಸೋಲಾಪುರ ಹೆದ್ದಾರಿಯ ಕುಂಬಾರಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನವು ಕುಂಭಾರ್ಲಿ ಗ್ರಾಮವನ್ನು ಸಮೀಪಿಸುತ್ತಿದ್ದಾಗ ಬಲಭಾಗದ ಟೈರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಪಲ್ಟಿಯಾಗಿದೆ ಎಂದು ಸಹಾಯಕ ನಿರೀಕ್ಷಕ ಅತುಲ್ ಭೋಸಲೆ ತಿಳಿಸಿದ್ದಾರೆ.

ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಏಳು ಮಂದಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

Tragic accident in Maharashtra: Vehicle overturns due to tire burst, five killed; seven injured