ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ರಷ್ಯಾದಿಂದ ಬಂದಿರುವ ಇ-ಮೇಲ್ !

ಬೆಂಗಳೂರಿನ ಖಾಸಗಿ ಶಾಲೆಗಳಿಗೆ ರಷ್ಯಾದಿಂದ ಬಾಂಬ್ ಬೆದರಿಕೆ ಬಂದಿರುವುದು ಪತ್ತೆಯಾಗಿದೆ.

Online News Today Team

ಬೆಂಗಳೂರು: ಕಳೆದ ತಿಂಗಳು (ಏಪ್ರಿಲ್) ನಿಗೂಢ ವ್ಯಕ್ತಿಗಳು ಬೆಂಗಳೂರು ಮತ್ತು ಬೆಂಗಳೂರು ಹೊರವಲಯದ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಸಂದೇಶ ರವಾನಿಸಿದ್ದರು.

ಈ ಘಟನೆ ಬೆಂಗಳೂರು ಮತ್ತು ಹೊರವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವೇಳೆ ಪೊಲೀಸರು ತೀವ್ರ ತನಿಖೆ ನಡೆಸಿದಾಗ ಶಾಲೆಗಳಿಗೆ ಬಂದಿರುವ ಇ-ಮೇಲ್ ರಷ್ಯಾದಿಂದ ಬಂದಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಆದರೆ ಇ-ಮೇಲ್ ಕಳುಹಿಸಿದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಮಧ್ಯಪ್ರದೇಶದ ಭೋಪಾಲ್‌ನ ಶಾಲೆಗಳ ಮೇಲೂ ಇದೆ ರೀತಿ ಬಾಂಬ್ ಬಾಂಬ್ ಬೆದರಿಕೆ ಪ್ರಸಂಗ ನಡೆದಿದೆ. ತಮಿಳು ಯುವಕನೊಬ್ಬ ಅಭಿವೃದ್ಧಿಪಡಿಸಿರುವ ಸಾಫ್ಟ್ ವೇರ್ ಮೂಲಕ ಬೆದರಿಕೆ ಬಂದಿರುವುದು ಬಯಲಾಗಿದೆ. ಈ ಹಿನ್ನೆಲೆ ತಮಿಳುನಾಡಿನ ಯುವಕನ ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

Bomb threat to Bangalore schools: E-mail from Russia revealed

Follow Us on : Google News | Facebook | Twitter | YouTube