ಕಣಿವೆಗೆ ಬಿದ್ದ ಕಾರು, ಚಾಲಕ ಹಾಗೂ ಒಂದೇ ಕುಟುಂಬದ ಐವರು ಸಾವು

ಉತ್ತರ ಸಿಕ್ಕಿಂನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದು, ಚಾಲಕ ಹಾಗೂ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ವಾಹನದ ಚಾಲಕ ಹಾಗೂ ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಪ್ರವಾಸಿ ತಾಣ ಲಾಚುಂಗ್‌ನಿಂದ 13 ಕಿಮೀ ದೂರದಲ್ಲಿರುವ ಕೆಡುಂಗ್‌ಬೀರ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರಜೆಯ ಹಿನ್ನೆಲೆಯಲ್ಲಿ ಸಿಕ್ಕಿಂಗೆ ಆಗಮಿಸಿದ ಕುಟುಂಬ, ರಾಜಧಾನಿ ಗ್ಯಾಂಗ್ಟಾಕ್‌ನಿಂದ ಲಾಚುಂಗ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಕಾರು ನಿಯಂತ್ರಣ ತಪ್ಪಿ ಪಕ್ಕದ ಕಣಿವೆಗೆ ಬಿದ್ದಿದೆ. ಮೃತರನ್ನು ಸುರೇಶ್ ಪುನಾಮಿಯಾ, ತುರಲ್ ಪುನಾಮಿಯಾ, ಹೆರಾಲ್ ಪುನಾಮಿಯಾ, ದೇವಾಂಶಿ ಪುನಾಮಿಯಾ, ಜಯನ್ ಪರಿಮಾರ್ ಮತ್ತು ಚಾಲಕ ಸೋಮಿ ವಿಶ್ವಕರ್ಮ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಣಿವೆಗೆ ಬಿದ್ದ ಕಾರು, ಚಾಲಕ ಹಾಗೂ ಒಂದೇ ಕುಟುಂಬದ ಐವರು ಸಾವು - Kannada News

ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಮೃತದೇಹಗಳನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ ಎಂದು ಸೇನೆ ತಿಳಿಸಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Car Fell Into Gorge In Sikkim Six People Died

Follow us On

FaceBook Google News

Read More News Today