ಕಟ್ಟಡದ 22ನೇ ಮಹಡಿಯಿಂದ ಜಿಗಿದು ಯುವ ಜೋಡಿ ಸಾವು
ನೋಯ್ಡಾದಲ್ಲಿ ವಸತಿ ಕಟ್ಟಡದ 22 ನೇ ಮಹಡಿಯಿಂದ ಜಿಗಿದ ಯುವ ಜೋಡಿ ಸಾವನ್ನಪ್ಪಿದ್ದಾರೆ
ಲಖನೌ: ಕಟ್ಟಡದ 22ನೇ ಮಹಡಿಯಿಂದ ಜಿಗಿದು ಯುವ ಜೋಡಿ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಗ್ರೇಟರ್ ನೋಯ್ಡಾದ ಬಿಸ್ರಖ್ ಪೊಲೀಸ್ ಠಾಣೆಯ ಭಾಗವಾದ ನೋಯ್ಡಾ ವಿಸ್ತರಣೆಯಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡಗಳ ಸಂಕೀರ್ಣದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಯುವಕ ಮತ್ತು ಯುವತಿ ಕಟ್ಟಡದ 22 ನೇ ಮಹಡಿಯಿಂದ ಜಿಗಿದಿದ್ದಾರೆ.
ಇಬ್ಬರೂ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಯುವಕನ ಮನೆಗೆ ಗಾಜಿಯಾಬಾದ್ನ ಯುವತಿಯೊಬ್ಬಳು ಬಂದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಆದಾಗ್ಯೂ ಈ ಕಠಿಣ ನಿರ್ಧಾರಕ್ಕೆ ಕಾರಣವಾದ ಕಾರಣಗಳನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಸಾವಿನ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.
34 ವರ್ಷದ ಐಟಿ ವೃತ್ತಿಪರರೊಬ್ಬರು ಮಂಗಳವಾರ ನೋಯ್ಡಾ ಸೆಕ್ಟರ್ 74 ರಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದಕ್ಕೂ ಮೊದಲು ಮೇ 3 ರಂದು ಸಹ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದರು. ನೋಯ್ಡಾ ಸೆಕ್ಟರ್ 93A ನಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ದಿನ ಮತ್ತೊಬ್ಬ ಮಹಿಳೆ ಬರೋಲಾ ಗ್ರಾಮದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Man Woman Die After Jumping Off 22nd Floor Of Residential Building In Noida
Follow Us on : Google News | Facebook | Twitter | YouTube