ಧಾರವಾಡದಲ್ಲಿ ಭೀಕರ ಅಪಘಾತ, ಸಾವಿನ ಸಂಖ್ಯೆ 9 ಕ್ಕೆ ಏರಿಕೆ

ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಜನರು ಸಾವನ್ನಪ್ಪಿರುವ ಭೀಕರ ರಸ್ತೆ ಅಪಘಾತ ಧಾರವಾಡದಲ್ಲಿ ಸಂಭವಿಸಿದೆ

Online News Today Team

ಧಾರವಾಡ: ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ (Dharwad Road Accident) ನಡೆದಿದೆ. ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಜನರು ಸಾವನ್ನಪ್ಪಿರುವ (9 Died in Accident) ಭೀಕರ ರಸ್ತೆ ಅಪಘಾತ ಧಾರವಾಡದಲ್ಲಿ ಸಂಭವಿಸಿದೆ, ಮರಕ್ಕೆ ವಾಹನ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.

ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು (Dharwad Police) ತಿಳಿಸಿದ್ದಾರೆ. ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಎಸ್ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

Nine People Died After Their Vehicle Hit A Tree In Dharwad Last Night - Kannada News
Image Credit : ANI

ಧಾರವಾಡದಲ್ಲಿ ಅಪಘಾತ – ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಜನರು ಸಾವು

ಮನ್ಸೂರ್ ಗ್ರಾಮದಲ್ಲಿ ಮೇ 20 ರಂದು ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಲ್ಲಿ ಇನ್ನೂ 10 ಜನರು ಗಾಯಗೊಂಡಿದ್ದಾರೆ. ವಾಹನದಲ್ಲಿ 21 ಮಂದಿ ಇದ್ದರು ಎಂಬ ಮಾಹಿತಿ ದೊರೆತಿದೆ.

ಧಾರವಾಡದಲ್ಲಿ ಅಪಘಾತ - ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಜನರು ಸಾವು - Kannada News
ಧಾರವಾಡದಲ್ಲಿ ಅಪಘಾತ – ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಜನರು ಸಾವು

ಇನ್ನು ಅಪಘಾತದಲ್ಲಿ ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಮಹೇಶ್ವರಯ್ಯ(11), ಶಂಭುಲಿಂಗಯ್ಯ(35) ಮೃತಪಟ್ಟವರು ಎಂದು ಗುರುತಿಸಲಾಗಿದೆ. 4 ಜನರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮದುವೆ ನಡೆಯಬೇಕಿದ್ದ ಮನೆಯಲ್ಲಿ ಈ ರಸ್ತೆ ಅಪಘಾತ ನೀರವ ಮೌನ ತಂದಿದೆ, ಅಘಾತದಿಂದ ಸಂಭ್ರಮದ ಬದಲಿಗೆ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ. ಅಪಘಾತ ಸ್ಥಳಕ್ಕೆ ಎಸ್​ಪಿ ಕೃಷ್ಣಕಾಂತ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Nine People Died After Their Vehicle Hit A Tree In Dharwad Last Night

ಧಾರವಾಡದಲ್ಲಿ ಭೀಕರ ಅಪಘಾತ
ಧಾರವಾಡದಲ್ಲಿ ಭೀಕರ ಅಪಘಾತ

English Summary

Dharwad (ಧಾರವಾಡ): As many as Nine people were killed (ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ) and 10 others injured (ಹತ್ತು ಮಂದಿ ಗಾಯಗೊಂಡಿದ್ದಾರೆ) after their vehicle hit a tree in Dharwad district of Karnataka on Friday night (ಮರಕ್ಕೆ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ).

The vehicle carrying 21 people (ವಾಹನದಲ್ಲಿ ಅಪಘಾತದ ಸಮಯದಲ್ಲಿ ಇಪ್ಪತ್ತೊಂದು ಮಂದಿಗೂ ಹೆಚ್ಚು ಜನರು ಇದ್ದರು) was on its way to Benkankatti when it met with an accident in Nigadi area of the district. The people were returning from a wedding Function (ನಿಶ್ಚಿತಾರ್ಥ ಕಾರ್ಯಕ್ರಮ).

The injured people have been admitted to a nearby hospital.

Follow Us on : Google News | Facebook | Twitter | YouTube