ವಿದ್ಯಾರ್ಥಿಯನ್ನು ಜಾತಿ ಹೆಸರಿನಲ್ಲಿ ನಿಂದಿಸಿ ಬೆಂಕಿಗೆ ಎಸೆದ ವಿದ್ಯಾರ್ಥಿಗಳು
ವಿದ್ಯಾರ್ಥಿಯೊಬ್ಬನನ್ನು ಕೆಲವು ವಿದ್ಯಾರ್ಥಿಗಳು ಜಾತಿ ಹೆಸರಿನಲ್ಲಿ ನಿಂದಿಸಿ ಬೆಂಕಿಗೆ ತಳ್ಳಿದ ಘಟನೆ ನಡೆದಿದೆ.
ಚೆನ್ನೈ: ವಿದ್ಯಾರ್ಥಿಯೊಬ್ಬನನ್ನು ಕೆಲವು ವಿದ್ಯಾರ್ಥಿಗಳು ಜಾತಿ ಹೆಸರಿನಲ್ಲಿ ನಿಂದಿಸಿ ಬೆಂಕಿಗೆ ತಳ್ಳಿದ ಘಟನೆ ನಡೆದಿದೆ. ಇದರಿಂದ ಆತನಿಗೆ ಸುಟ್ಟ ಗಾಯಗಳಾಗಿವೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
11 ವರ್ಷದ ದಲಿತ ವಿದ್ಯಾರ್ಥಿ ತಿಂಡಿವನಂ ಪಟ್ಟಣದ ಕಟ್ಟುಚಿವಿರಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ. ಸೋಮವಾರ ಸಂಜೆ 4.30ಕ್ಕೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಅದೇ ಶಾಲೆಯ ಮೇಲ್ವರ್ಗದ ಮೂವರು ವಿದ್ಯಾರ್ಥಿಗಳು ಜಾತಿ ಹೆಸರಿನಲ್ಲಿ ಅವವನನ್ನು ನಿಂದಿಸಿದ್ದಾರೆ. ಅವನನ್ನು ಚುಡಾಯಿಸಿ ಸುಡುವ ಬೆಂಕಿಗೆ ಎಸೆದಿದ್ದಾರೆ.
ವಿದ್ಯಾರ್ಥಿ ಸುಟ್ಟಗಾಯಗಳೊಂದಿಗೆ ಮನೆಗೆ ಮರಳಿದ್ದಾನೆ. ಇದನ್ನು ನೋಡಿದ ಆತನ ಪೋಷಕರು ಬೆಚ್ಚಿಬಿದ್ದರು. ಏನಾಯ್ತು ಎಂದು ಕೇಳಿದರೆ ಬೆಂಕಿಯಲ್ಲಿ ತಾನೇ ಬಿದ್ದ ಬಗ್ಗೆ ಮೊದಲು ಸುಳ್ಳು ಹೇಳಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು ಮಗನನ್ನು ಚಿಕಿತ್ಸೆಗಾಗಿ ತಿಂಡಿವನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಏನಾಯಿತು ಎಂದು ವೈದ್ಯರು ಜೋರಾಗಿ ಕೇಳಿದಾಗ ಆಗ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕೆಲ ಮೇಲ್ಜಾತಿ ವಿದ್ಯಾರ್ಥಿಗಳು ಜಾತಿ ಹೆಸರಿನಲ್ಲಿ ನಿಂದಿಸಿ ಬೆಂಕಿಗೆ ತಳ್ಳಿದ್ದಾರೆ ಎಂಬ ಸತ್ಯ ಹೇಳಿದ್ದಾನೆ. ತನ್ನ ಅಂಗಿಗೆ ಬೆಂಕಿ ಹೊತ್ತಿಕೊಂಡಾಗ ಹತ್ತಿರದ ಕೊಳಕ್ಕೆ ಹಾರಿರುವುದಾಗಿ ಹೇಳಿದ್ದಾನೆ.
ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಕೊಲೆ ಯತ್ನಕ್ಕಾಗಿ ಮೂವರು ವಿದ್ಯಾರ್ಥಿಗಳ ವಿರುದ್ಧ ಎಸ್ಸಿ ಮತ್ತು ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Students Hurl Caste Slur At Tamil Nadu Minor Push Him Into Fire, Booked
Follow Us on : Google News | Facebook | Twitter | YouTube