ಸಹೋದರರ ನಡುವಿನ ಸೆಲ್‌ಫೋನ್ ಜಗಳ ಕೊಲೆಯಲ್ಲಿ ಅಂತ್ಯ
ಇಬ್ಬರು ಸಹೋದರರ ನಡುವಿನ ಮೊಬೈಲ್ ವಾಗ್ವಾದವು ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಇದೇ ತಿಂಗಳ 23 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಹಮದಾಬಾದ್: ಇಬ್ಬರು ಸಹೋದರರ ನಡುವಿನ ಮೊಬೈಲ್ ವಾಗ್ವಾದವು ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಇದೇ ತಿಂಗಳ 23 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದಿಂದ ಕುಟುಂಬವೊಂದು ಖೇಡಾ ಜಿಲ್ಲೆಗೆ ವಲಸೆ ಬಂದು ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಆದಾಗ್ಯೂ, ಇಬ್ಬರು ಸಹೋದರರು (ಇಬ್ಬರೂ ಅಪ್ರಾಪ್ತರು) ತಮ್ಮ ಸೆಲ್ ಫೋನ್‌ಗಳಲ್ಲಿ ದೀರ್ಘಕಾಲದವರೆಗೆ ವೀಡಿಯೊ ಗೇಮ್‌ಗಳನ್ನು ಆಡುತ್ತಿದ್ದರು.
ಅಣ್ಣ ಬಂದು ಬಲವಂತವಾಗಿ ತಮ್ಮನಿಂದ ಮೊಬೈಲ್ ಪಡೆದು ಆಟವಾಡಲು ಪ್ರಯತ್ನಿಸಿದನು. ತಮ್ಮ ಮೊಬೈಲ್ ಕೊಡಲು ನಿರಾಕರಿಸಿದ್ದರಿಂದ ದೊಡ್ಡ ಕಲ್ಲಿನಿಂದ ಹೊಡೆದಿದ್ದಾನೆ. ಪ್ರಜ್ಞೆ ತಪ್ಪಿದ ತಮ್ಮನನ್ನು ಹತ್ತಿರದ ಬಾವಿಗೆ ಎಸೆದಿದ್ದಾನೆ.
ಕೂಡಲೇ ಬಸ್ ಹತ್ತಿ ರಾಜಸ್ಥಾನದ ತನ್ನ ಊರಿಗೆ ಹೊರಟು ಹೋಗಿದ್ದಾನೆ. ಆದರೆ, ಕತ್ತಲಾದ ನಂತರ ಮಕ್ಕಳು ಕಾಣುತ್ತಿಲ್ಲ ಎಂದು ಆತಂಕಗೊಂಡ ಪೋಷಕರು ಊರಿಗೆ ಫೋನ್ ಮಾಡಿ ಕೇಳಿದ್ದಾರೆ.
ಅಲ್ಲಿ ಹಿರಿಯ ಮಗ ಇದ್ದಾನೆಂದು ತಿಳಿದು ಹಾಗು ಸಹೋದರನನ್ನು ಕೊಂದಿದ್ದಾನೆ ಎಂಬ ವಿಷಯ ತಿಳಿದುಬಂದಿದೆ. ಕೊನೆಗೆ ಪೊಲೀಸರಿಗೆ ವಿಷಯ ತಿಳಿಸಿದಾಗ ಅಣ್ಣನನ್ನು ಬಂಧಿಸಲಾಯಿತು.
Teenager Kills Brother For Not Giving Mobile Phone
Follow us On
Google News |