ಮಾಂತ್ರಿಕನಿಂದ 79 ದಿನಗಳ ಕಾಲ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ !
ತನ್ನ ಮಗುವಿನ ಮುಂದೆಯೇ 79 ದಿನಗಳ ಕಾಲ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮಾಂತ್ರಿಕನ ಕೈಯಿಂದ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.
ಭುವನೇಶ್ವರ: ತನ್ನ ಮಗುವಿನ ಮುಂದೆಯೇ 79 ದಿನಗಳ ಕಾಲ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮಾಂತ್ರಿಕನ ಕೈಯಿಂದ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಮಹಿಳೆ 2017 ರಲ್ಲಿ ವ್ಯಕ್ತಿಯನ್ನು ವಿವಾಹವಾದರು. ಆದರೆ, ಹೆಚ್ಚುವರಿ ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ-ಮಾವಂದಿರು ಕಿರುಕುಳ ನೀಡುತ್ತಿದ್ದರು.
ಈ ನಡುವೆ, ಕೌಟುಂಬಿಕ ಸಮಸ್ಯೆಯನ್ನು ಹೋಗಲಾಡಿಸುವುದಾಗಿ ಮಾಂತ್ರಿಕ ನಂಬಿಸಿದ್ದ. ಇದಕ್ಕಾಗಿ ಆತ ಮಹಿಳೆಯನ್ನು ಕೆಲವು ತಿಂಗಳು ತನ್ನೊಂದಿಗೆ ಇಟ್ಟುಕೊಳ್ಳುವಂತೆ ಅತ್ತೆಯವರಿಗೆ ತಿಳಿಸಿದ್ದಾನೆ. ಆದರೆ, ಮಹಿಳೆ ಒಪ್ಪಲಿಲ್ಲ. ಎರಡು ತಿಂಗಳ ಹಿಂದೆ ಆಕೆಯ ಚಿಕ್ಕಮ್ಮ ಆಕೆಗೆ ಮತ್ತಿನ ಪದಾರ್ಥ ನೀಡಿ ಮಾಂತ್ರಿಕನ ಬಳಿ ಕರೆದುಕೊಂಡು ಹೋಗಿದ್ದರು. ಆಕೆಗೆ ಪ್ರಜ್ಞೆ ಬಂದಾಗ ಆಕೆ ಮಾಂತ್ರಿಕನ ಕೋಣೆಯಲ್ಲಿದ್ದಳು. ತನ್ನ ಎರಡೂವರೆ ವರ್ಷದ ಮಗನನ್ನೂ ಅಲ್ಲೇ ಬಿಟ್ಟು ಹೋಗಿದ್ದರು.
ಮತ್ತೊಂದೆಡೆ ಮಾಂತ್ರಿಕ ಮಹಿಳೆಯನ್ನು ಕೋಣೆಯಲ್ಲಿ ಬಂದಿಸಿದ್ದ. ಆಕೆಯ ಗಂಡು ಮಗುವಿನ ಮುಂದೆ ಸತತ 79 ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಾಂತ್ರಿಕ ಏಪ್ರಿಲ್ 28 ರಂದು ಆಕೆಯನ್ನು ಬಂಧಿಸಿದ್ದ ಕೊಠಡಿಯಲ್ಲಿ ತನ್ನ ಮೊಬೈಲ್ ಫೋನ್ ಅನ್ನು ಮರೆತುಬಿಟ್ಟಿದ್ದ. ಮಹಿಳೆ ತನ್ನ ಪೋಷಕರಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾಳೆ. ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾಳೆ. ತಕ್ಷಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಮಾಂತ್ರಿಕನಿಂದ ಆಕೆ ಮತ್ತು ಆಕೆಯ ಮಗನನ್ನು ಅಲ್ಲಿಂದ ರಕ್ಷಿಸಿದ್ದಾರೆ. ಅಷ್ಟೊತ್ತಿಗಾಗಲೇ ವಿಷಯ ತಿಳಿದ ಮಾಂತ್ರಿಕ ಅಲ್ಲಿಂದ ಪರಾರಿಯಾಗಿದ್ದ. ಇದರಿಂದ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಎರಡು ತಿಂಗಳಿಗೂ ಹೆಚ್ಚು ಕಾಲ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಮಾಂತ್ರಿಕನ ಜೊತೆಗೆ ಆಕೆಯ ಪತಿ, ಆತನ ಸಹೋದರ ಮತ್ತು ಅತ್ತೆಯ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Woman Raped By Tantrik For 79 Days In Front Of Minor Son Rescued
Follow Us on : Google News | Facebook | Twitter | YouTube