ಡ್ರಗ್ಸ್ ದಂಧೆಯಲ್ಲಿ ಕರಾಚಿ ಡಾನ್ ಭಾಗಿ!
ಕರಾಚಿ ಡ್ರಗ್ ಮಾಫಿಯಾ ಡಾನ್ ಹಾಜಿ ಹಸನ್ ಅವರ ಪುತ್ರ ಸಾಜಿದ್ ಇತ್ತೀಚೆಗೆ ಡ್ರಗ್ ಪ್ರಕರಣದಲ್ಲಿ ಗುಜರಾತ್ ಕರಾವಳಿಯಲ್ಲಿ ಬಂಧಿತ ಆರು ಪಾಕಿಸ್ತಾನಿಗಳಲ್ಲಿ ಒಬ್ಬ
ಅಹಮದಾಬಾದ್: ಕರಾಚಿ ಡ್ರಗ್ ಮಾಫಿಯಾ ಡಾನ್ ಹಾಜಿ ಹಸನ್ ಅವರ ಪುತ್ರ ಸಾಜಿದ್ ಇತ್ತೀಚೆಗೆ ಡ್ರಗ್ ಪ್ರಕರಣದಲ್ಲಿ ಗುಜರಾತ್ ಕರಾವಳಿಯಲ್ಲಿ ಬಂಧಿತ ಆರು ಪಾಕಿಸ್ತಾನಿಗಳಲ್ಲಿ ಒಬ್ಬ ಎಂದು ಗುರುತಿಸಲಾಗಿದೆ.
ಇಂಡಿಯಾ ಟುಡೇ ಪ್ರಕಾರ, ಆರು ಮಂದಿಯ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗಿದ್ದು, ವಿಷಯ ಬಹಿರಂಗವಾಗಿದೆ. ಈ ತಿಂಗಳ 19 ರಂದು ಅಧಿಕಾರಿಗಳು 400 ಕೋಟಿ ಮೌಲ್ಯದ 77 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಂಜಾಬ್ಗೆ ಎಲ್ಲಾ ಡ್ರಗ್ಗಳನ್ನು ಸಾಗಿಸಲು ಆರೋಪಿಗಳು ಯೋಜಿಸಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Follow Us on : Google News | Facebook | Twitter | YouTube