ವಿದ್ಯಾರ್ಥಿನಿಗೆ ನಾಲ್ಕು ವರ್ಷಗಳಿಂದ ಲೈಂಗಿಕ ಕಿರುಕುಳ.. ಕರಾಟೆ ಮಾಸ್ಟರ್ ಬಂಧನ

ನಾಲ್ಕು ವರ್ಷಗಳಿಂದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಖಾಸಗಿ ಶಾಲೆಯ ಕರಾಟೆ ಮಾಸ್ಟರ್ ಹಾಗೂ ದೂರನ್ನು ನಿರ್ಲಕ್ಷಿಸಿದ ಶಾಲೆಯ ಕರೆಸ್ಪಾಂಡೆಂಟ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ: ನಾಲ್ಕು ವರ್ಷಗಳಿಂದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಖಾಸಗಿ ಶಾಲೆಯ ಕರಾಟೆ ಮಾಸ್ಟರ್ ಹಾಗೂ ದೂರನ್ನು ನಿರ್ಲಕ್ಷಿಸಿದ ಶಾಲೆಯ ಕರೆಸ್ಪಾಂಡೆಂಟ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಸೇಲಂ ಜಿಲ್ಲೆಯ ಖಾಸಗಿ ಶಾಲೆಯೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಈ ತಿಂಗಳ 22 ರಂದು ಮನೆಯಲ್ಲಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಯತ್ನ ನಡೆಸಿದ್ದಾಳೆ, ತಕ್ಷಣ ನೋಡಿಕೊಂಡ ಆಕೆಯ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಚಿಕಿತ್ಸೆ ಬಳಿಕ ಚೇತರಿಸಿಕೊಂಡ ವಿದ್ಯಾರ್ಥಿನಿ ಆತ್ಮಹತ್ಯೆಗೆ ನೀಡಿದ ಕಾರಣಗಳಿಂದ ಪೋಷಕರು ಬೆಚ್ಚಿಬಿದ್ದಿದ್ದಾರೆ. ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾಗಿನಿಂದ ಕರಾಟೆಮಾಸ್ಟರ್ ರಾಜಾ ಎಂಬಾತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಶಾಲೆಯ ಕರೆಸ್ಪಾಂಡೆಂಟ್ ಸ್ಟೀಫನ್ ದೇವರಾಜ್ ಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈಕೆಯ ಕರಾಟೆ ಮಾಸ್ಟರ್ ಚೇಷ್ಟೆಯಿಂದ ಇತ್ತೀಚೆಗಷ್ಟೇ ಆಕೆ ಆತ್ಮಹತ್ಯೆ ಯತ್ನ ನಡೆಸಿರುವುದಾಗಿ ಆಕೆಯ ಪೋಷಕರಿಗೆ ಗೊತ್ತಾಗಿದೆ. ವಿಷಯ ತಿಳಿದ ಸ್ಥಳೀಯರು ಕರಾಟೆ ಮಾಸ್ಟರ್ ರಾಜನನ್ನು ಹಿಡಿದು ಕರುಮತುರೈ ಪೊಲೀಸರಿಗೆ ಒಪ್ಪಿಸಿದ್ದಾರೆ.

ದೂರು ನೀಡಿದರೂ ಕ್ರಮ ಕೈಗೊಳ್ಳದ ಶಾಲಾ ಕರೆಸ್ಪಾಂಡೆಂಟ್ ಸ್ಟೀಫನ್ ದೇವರಾಜ್ ಅವರನ್ನು ಸಹ ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today