ವ್ಯಕ್ತಿಯ ಅಪಹರಣ – ಐವರು ಅಂದರ್

Kidnapping-Five People Arrested | itskannada Crime

ಬೆಳಗಾವಿ, ಜನವರಿ 10 (itskannada): ವ್ಯಕ್ತಿಯ ಅಪಹರಣ – ಐವರು ಅಂದರ್ :  ಹಣದ ವ್ಯವಹಾರ ಸಂಬಂಧ ವ್ಯಕ್ತಿಯನ್ನು ಅಪಹರಣ ಮಾಡಿದ್ದ ಐವರು ಮಹಾನುಭಾವರನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯ ಅಪಹರಣ – ಐವರು ಅಂದರ್

ಬೆಳಗಾವಿ ತಾಲೂಕಿನ ಸೂಳೆಬಾವಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿನಾಯಕ ವಸಂತ ಪಾಟೀಲ (39),  ಪ್ರಮೋದ ಪ್ರಭಾಕರ ಯಾಳಗಿ (25)ಪ್ರಶಾಂತ ದೇವನ (37), ಗಜಾನನ ದೇವರಮನಿ (21) ಹಾಗೂ ಶ್ಯಾಮ ಪಾಟೀಲ (37) ರವರನ್ನು ಬಂಧಿಸಲಾಗಿದೆ.

ಹಣಕಾಸಿನ ವ್ಯವಹಾರ ಸಂಬಂಧ ಸುಳೆಭಾವಿ ಗ್ರಾಮದ  ನಾಗರಾಜ ಬಸವರಾಜ ಪರೀಟ ಎಂಬಾತನನ್ನು ಶನಿವಾರ ತಡರಾತ್ರಿ ಅಪರಣ ಮಾಡಿದ್ದರು. ಈ ಕುರಿತು ಕುಟುಂಬಸ್ಥರು ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಾನುವಾರ ಮತ್ತೆ ಸುಳೇಭಾವಿ ಗ್ರಾಮಕ್ಕೆ ಬಂದು ಹಣ ನೀಡುವಂತೆ ಒತ್ತಾಯಿಸುತ್ತಿದ್ದ ವೇಳೆ ಸೂಕ್ತ ಸಮಯಕ್ಕೆ ಕಾರ್ಯ ಪ್ರವೃತ್ತರಾದ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಮಾರಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂದ ವಿಚಾರಣೆ ನಡೆಸಲಾಗುತ್ತಿದೆ.| itskannada Crime

ವ್ಯಕ್ತಿಯ ಅಪಹರಣ - ಐವರು ಅಂದರ್ - Kannada News

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

Follow us On

FaceBook Google News