Welcome To Kannada News Today

ಹಾವಿನಿಂದ ಪತ್ನಿಯನ್ನು ಕಚ್ಚಿಸಿ ಕೊಂದ ಪತಿ ಕೃತ್ಯ ಸಾಬೀತು

ಹಾವಿನಿಂದ ಪತ್ನಿಯನ್ನು ಕಚ್ಚಿಸಿ ಕೊಲೆ ಮಾಡಿದ್ದ ಪತಿರಾಯನಿಗೆ ಶಿಕ್ಷೆ ವಿಧಿಸಲಾಗಿದೆ. ಕೊಲ್ಲಂ ಜಿಲ್ಲೆಯ ಅಂಚಲ್ ಪಟ್ಟಣದ ಸೂರಜ್ ದಂಪತಿಗಳು. ಮದುವೆಯಾಗಿ ವರ್ಷಗಳ ಕಾಲ ಚನ್ನಾಗಿಯೇ ಇದ್ದರು.

🌐 Kannada News :

ಹಾವಿನಿಂದ ಪತ್ನಿಯನ್ನು ಕಚ್ಚಿಸಿ ಕೊಲೆ ಮಾಡಿದ್ದ ಪತಿರಾಯನಿಗೆ ಶಿಕ್ಷೆ ವಿಧಿಸಲಾಗಿದೆ. ಕೊಲ್ಲಂ ಜಿಲ್ಲೆಯ ಅಂಚಲ್ ಪಟ್ಟಣದ ಸೂರಜ್ ದಂಪತಿಗಳು. ಮದುವೆಯಾಗಿ ವರ್ಷಗಳ ಕಾಲ ಚನ್ನಾಗಿಯೇ ಇದ್ದರು.

ಸೂರಜ್, ನಂತರ ಬೇರೆ ಹುಡುಗಿಯನ್ನು ಮದುವೆಯಾಗಲು ಬಯಸಿದನು. ಅದಕ್ಕಾಗಿ ಅವನು ಒಂದು ಕ್ರಿಮಿನಲ್ ಐಡಿಯಾ ಮಾಡಿ, ಹಾವು ಹಿಡಿಯುವವನಿಗೆ ಹಣ ಕೊಟ್ಟು ನಾಗರಹಾವನ್ನು ತೆಗೆದುಕೊಂಡು ಬಂದಿದ್ದನು.

ಕಳೆದ ವರ್ಷ ಮೇ ತಿಂಗಳಲ್ಲಿ, ಅವನು ಅದನ್ನು ಮನೆಯಲ್ಲಿ ಮಲಗಿದ್ದ ಹೆಂಡತಿಯ ಬಳಿ ಬಿಟ್ಟಿದ್ದನು. ಎರಡು ಬಾರಿ ಹಾವು ಕಚ್ಚಿದ ನಂತರ ಆಕೆ ಮೃತಪಟ್ಟಳು. ಆಕೆಯ ಪೋಷಕರು ಸಾವಿನ ಅನುಮಾನದ ಮೇಲೆ ಪೊಲೀಸರಿಗೆ ದೂರು ನೀಡಿದ್ದರು.

ಸೂರಜ್ ನನ್ನು ಬಂಧಿಸಿದ ಪೊಲೀಸರು ಆತನನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆಗೊಳಪಡಿಸಿದರು ಮತ್ತು ನಿಜವಾದ ಸತ್ಯವನ್ನು ಬಹಿರಂಗಪಡಿಸಿದರು.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today