ತಾಯಿಯನ್ನು ಕೊಂದು ಮಗಳು ಪರಾರಿ, ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಘಟನೆ
KR Puram Girl allegedly kills mother - Crime in Bangalore
ಕನ್ನಡ ನ್ಯೂಸ್ ಟುಡೇ – Crime News
Bangalore, KR Puram : ವೃತ್ತಿಯಲ್ಲಿ ಎಂಜಿನಯರ್ ಆಗಿ ಕೆಲಸ ಮಾಡುತ್ತಿದ್ದ ಅಮೃತ (33) ತನ್ನ ತಾಯಿಯನ್ನು ಚಾಕುವಿನಿಂದ ಇರಿದು, ತನ್ನ ತಮ್ಮ ಹರೀಶ್ ನನ್ನ ಸಹ ಕೊಲ್ಲಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ಕೆ.ಆರ್.ಪುರಂ ನ ಅಕ್ಷಯ ನಗರದಲ್ಲಿ ಈ ಘಟನೆ ನಡೆದಿದ್ದು. ನಿರ್ಮಲಾ ಎಂಬಾಕೆಯೇ ಕೊಲೆಯಾದ ತಾಯಿ.
ಮಾಹಿತಿಯ ಪ್ರಕಾರ, ಕೊಲೆಗೆ ಮೂಲ ಕಾರಣ ಪೋಲೀಸರ ತನಿಖೆಯಿಂದಷ್ಟೇ ಹೊರ ಬೀಳಬೇಕಾಗಿದೆ, ಈ ನಡುವೆ ಸ್ಥಳೀಯರ ಮಾಹಿತಿ ಪ್ರಕಾರ ಸಾಲದ ವಿಚಾರವಾಗಿ ಮಗಳು ಮತ್ತು ತಾಯಿಯ ನಡುವೆ ಆಗಾಗ ಜಗಳವಾಗುತ್ತಿದ್ದುದು ಬೆಳಕಿಗೆ ಬಂದಿದೆ. ಇದೆ ಕಾರಣಕ್ಕೆ ಮಲಗಿದ್ದ ತಾಯಿಯನ್ನು ಮಗಳು ಚಾಕುವಿನಿಂದ ಇರಿದಿದ್ದಾಳೆ ಎನ್ನಲಾಗಿದೆ.
ಆದರೆ, ಅಮೃತಾ ಪ್ರೀತಿಯ ವಿಚಾರದಲ್ಲಿ ಮನೆಯವರಿಂದ ವಿರೋಧವಿತ್ತು, ಅದೇ ಕಾರಣಕ್ಕೆ ಆಕೆ ಕೊಲೆ ಮಾಡಿರ ಬಹುದು ಅಂತಲೂ ಶಂಕಿಸಲಾಗಿದೆ. ತಾಯಿಯನ್ನು ಇರಿದು ಕೊಲೆ ಮಾಡಿದ ಅಮೃತ ನಂತರ ತನ್ನ ತಮ್ಮ ಹರೀಶ್ ನನ್ನು ಸಹ ಕೊಲ್ಲಲು ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಧ್ಯ ತಾಯಿಯನ್ನು ಕೊಂದ ಮಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.
Quick Links : Kannada Crime News । Karnataka Crime News
Web Title : KR Puram Girl allegedly kills mother
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
Follow us On
Google News |