ತುಮಕೂರು ಬಳಿ ಭೀಕರ ರಸ್ತೆ ಅಪಘಾತ.. ಒಂಬತ್ತು ಮಂದಿ ಸಾವು

ತಮಕೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುರುವಾರ ಬೆಳಗಿನ ಜಾವ ಶಿರಾ ತಾಲೂಕಿನ ಬಳಿ ಲಾರಿ ಮತ್ತು ಜೀಪು ನಡುವೆ ಡಿಕ್ಕಿ ಸಂಭವಿಸಿದೆ.

ತಮಕೂರು (Tumkur): ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ಗುರುವಾರ ಬೆಳಗಿನ ಜಾವ ಶಿರಾ ತಾಲೂಕಿನ ಬಳಿ ಲಾರಿ ಮತ್ತು ಜೀಪು ನಡುವೆ ಡಿಕ್ಕಿ ಸಂಭವಿಸಿದೆ. ಈ ಘಟನೆಯಲ್ಲಿ ಒಂಬತ್ತು ಮಂದಿ (9 people Dead) ಸಾವನ್ನಪ್ಪಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರೆಲ್ಲರೂ ರಾಯಚೂರು ಜಿಲ್ಲೆಗೆ ಸೇರಿದವರು ಎಂದು ತಿಳಿದುಬಂದಿದೆ.

Tumkur Accident Today

ಅಪಘಾತದ ವೇಳೆ ಜೀಪಿನಲ್ಲಿ ಸುಮಾರು 20 ಮಂದಿ ಇದ್ದರು. ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಜೀಪ್ ಓವರ್ ಟೇಕ್ ಮಾಡುವಾಗ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ ಈ ಘಟನೆ ನಡೆದಿದೆ.

ತುಮಕೂರು ಬಳಿ ಭೀಕರ ರಸ್ತೆ ಅಪಘಾತ.. ಒಂಬತ್ತು ಮಂದಿ ಸಾವು - Kannada News

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.

lorry and cruiser collision 9 people killed in road accident in tumkur

Follow us On

FaceBook Google News

Advertisement

ತುಮಕೂರು ಬಳಿ ಭೀಕರ ರಸ್ತೆ ಅಪಘಾತ.. ಒಂಬತ್ತು ಮಂದಿ ಸಾವು - Kannada News

Read More News Today