ಲವರ್ ಗೆ ಇಲಿ ಪಾಷಾಣ ಕುಡಿಸಿದ ಪಾಗಲ್ ಪ್ರೇಮಿ

Lover forced to drink rat poison, She died in a hospital

ಕನ್ನಡ ನ್ಯೂಸ್ ಟುಡೇCrime News

ಕರ್ನಾಟಕ : ತೊಂಡೆಬಾವಿ ಹೋಬಳಿ ಕಮಲಾಪುರ ಗ್ರಾಮದ ವೆಂಕಟೇಶ್ (೨೧) ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಅನುಮಾನ ಬೆಳೆಸಿಕೊಂಡು ಕೊನೆಗೆ ಅವಳ ಕಥೆಯನ್ನೇ ಮುಗಿಸಿದ ಧಾರುಣ ಘಟನೆ ನಡೆದಿದೆ. ವೆಂಕಟೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು, ಆಕೆ ಸಹ ವೆಂಕಟೇಶ್ ನನ್ನ ಪ್ರೀತಿಸುತ್ತಿದ್ದಳು, ಆದರೆ ಕೆಲ ದಿನಗಳಿಂದ ವೆಂಕಟೇಶ್ ಗೆ ಆಕೆಯ ಮೇಲೆ ಅನುಮಾನ ಮೂಡಿತ್ತು.

ಈ ತಿಂಗಳ ೬ ರಂದು ವೆಂಕಟೇಶ್ ಆ ಯುವತಿಯನ್ನು ತೊಂಡೆಬಾವಿ ಸಮೀಪಕ್ಕೆ ಕರೆಯಿಸಿಕೊಂಡು ” ನಿನ್ನ ಪ್ರೇಮ ಪರಿಶುದ್ದವಾದರೆ, ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಇದನ್ನು ಕುಡಿ ” ಎಂದು ಇಲಿ ಪಾಷಾಣ ಕೈ ಇಟ್ಟು ಬಲವಂತ ಪಡಿಸಿದ್ದಾನೆ. ಅವನ ಮಾತಿನಂತೆ ಆಕೆ ಅದನ್ನು ಕುಡಿದಿದ್ದಾಳೆ, ನಂತರ ಇಬ್ಬರೂ ಅವರವರ ಮನೆಗೆ ತೆರಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಮನೆಗೆ ಬಂದ ಯುವತಿ ಸ್ವಲ್ಪ ಹೊತ್ತಲ್ಲೇ ವಾಂತಿ ಮತ್ತು ಹೊಟ್ಟೆ ನೋವಿನಿಂದ ನರಳಾಡಿದ್ದಾಳೆ, ಆಕೆಯ ನರಳಾಟ ಕಂಡ ಆಕೆಯ ಅಣ್ಣ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಅಸುನೀಗಿದ್ದಾಳೆ. ಇದರಿಂದ ಹೆದರಿದ ವೆಂಕಟೇಶ್ ಪೊಲೀಸರು ತನ್ನನ್ನು ಬಂದಿಸುತ್ತಾರೆಂದು ಹೆದರಿ ತಾನೂ ವಿಷ ಕುಡಿದವನಂತೆ ನಟಿಸುತ್ತಾನೆ.

ವೆಂಕಟೇಶ್ ಮನೆಯವರು ಆತನನ್ನು ಸಹ ಆಸ್ಪತ್ರೆಗೆ ಸೇರಿಸುತ್ತಾರೆ, ಆದರೆ ವೆಂಕಟೇಶ್ ಯಾವುದೇ ವಿಷ ಕುಡಿದಿಲ್ಲ ಎಂದು ವೈದ್ಯರು ದೃಢ ಪಡಿಸುತ್ತಾರೆ. ನಂತರ ಪೊಲೀಸರು ವಿಚಾರಣೆ ನಡೆಸಿ, ಇಲಿ ಪಾಷಾಣ ಕುಡಿಸಿದ ಆತನನ್ನು ಬಂಧಿಸಿದ್ದಾರೆ. ////

Quick Links : Kannada Crime News | Karnataka Crime News