Romance On Bike : ನಾಚಿಕೆ ಬಿಟ್ಟು ಹೆದ್ದಾರಿಯಲ್ಲಿ ಬೈಕ್‌ನಲ್ಲಿಯೇ ರೋಮ್ಯಾನ್ಸ್

Romance On Bike : ಪ್ರೇಮ ಜೋಡಿಯೊಂದು ನಾಚಿಕೆ ಬಿಟ್ಟು ಹೆದ್ದಾರಿಯಲ್ಲಿ ರೊಮ್ಯಾನ್ಸ್ ಮಾಡಿದೆ. ಇವರನ್ನು ಕಂಡ ವಾಹನ ಸವಾರರು ಚಿ... ತು.. ಮಾನ ಮರ್ಯಾದೆ ಇಲ್ವಾ... ಇವರಿಗೆ ಇನ್ನೆಲ್ಲೂ ಜಾಗನೇ ಇಲ್ವಾ ಅಂತ ಮೂಗು ತಿರುವಿದ್ದಾರೆ.

Online News Today Team

Romance On Bike : ಪ್ರೇಮಿಗಳು ಸಾಧ್ಯವಾದಷ್ಟು ಗೌಪ್ಯತೆಯನ್ನು ಬಯಸುತ್ತಾರೆ. ಯಾರ ಗಮನಕ್ಕೂ ಬರದಂತೆ ತಮ್ಮಷ್ಟಕ್ಕೆ ತಾವು ಕದ್ದು ಮುಚ್ಚಿ ಪ್ರೇಮದಾಟಗಳನ್ನು ಆಡುತ್ತಾರೆ, ಅದೆಲ್ಲಾ ನಮಗೆ ಗೊತ್ತೇ ಇದೆ.. ಅವರು ಉದ್ಯಾನವನಗಳಲ್ಲಿ ಮತ್ತು ಶಾಪಿಂಗ್ ಮಾಲ್ ಗಳಲ್ಲಿ ಭೇಟಿಯಾಗುತ್ತಾರೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಸ್ಟೋರಿ, ಪ್ರೇಮ ಜೋಡಿಯೊಂದು ನಾಚಿಕೆ ಬಿಟ್ಟು ಹೆದ್ದಾರಿಯಲ್ಲಿ ರೊಮ್ಯಾನ್ಸ್ ಮಾಡಿದೆ. ಇವರನ್ನು ಕಂಡ ವಾಹನ ಸವಾರರು ಚಿ… ತು.. ಮಾನ ಮರ್ಯಾದೆ ಇಲ್ವಾ… ಇವರಿಗೆ ಇನ್ನೆಲ್ಲೂ ಜಾಗನೇ ಇಲ್ವಾ ಅಂತ ಮೂಗು ತಿರುವಿದ್ದಾರೆ.

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಪ್ರೇಮಿಗಳು ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಪಾಟಿ ರೋಮ್ಯಾನ್ಸ್ ಮಾಡಿದ್ದಾರೆ. ಅದರಲ್ಲಿ ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡುಗನ ಮುಂದೆ ಕುಳಿತು, ಕೋತಿ ಮರಿ ಅಪ್ಪಿದಂತೆ ಅಪ್ಪಿ ಹುಡುಗನಿಗೆ ಪಪ್ಪಿ ಕೊಟ್ಟಿದ್ದಾಳೆ. ಹುಡುಗ ಬೈಕಿನಲ್ಲಿ ಹೋಗುತ್ತಿದ್ದಾಗ ಅವನನ್ನು ತಬ್ಬಿ ಮುತ್ತಿಟ್ಟಿದ್ದಾಳೆ.

Romance On Bike : ನಾಚಿಕೆ ಬಿಟ್ಟು ಹೆದ್ದಾರಿಯಲ್ಲಿ ಬೈಕ್‌ನಲ್ಲಿಯೇ ರೋಮ್ಯಾನ್ಸ್

ಆ ಹೈದ ತಾನೇನು ಕಮ್ಮಿಯಿಲ್ಲ ಎಂದು ಅವಳ ಜೊತೆ ಚೆಲ್ಲಾಟವಾಡುತ್ತಾ ಅವಳಿಗೂ ಮುತ್ತು ಕೊಟ್ಟು ಬೈಕ್ ಓಡಿಸಿದ್ದಾನೆ..

ಈ ವಿಡಿಯೋವನ್ನು ಮತ್ತೊಬ್ಬರು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದರಿಂದ ವೈರಲ್ ಆಗಿದೆ. ಬೈಕ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಾಮರಾಜನಗರ ಡಿಎಸ್ಪಿ ತಿಳಿಸಿದ್ದಾರೆ.

ಇದೆಲ್ಲಾ ಸರಿ… ಅವರನ್ನ ಹೆತ್ತವರಿಗೆ ಈ ವಿಷಯ ಗೊತ್ತಾದರೆ ಅವರ ಸಂಕಟ ಹೇಗಿರುತ್ತದೆ ?

Lovers Romance On Bike Riding In Main Road

Follow Us on : Google News | Facebook | Twitter | YouTube