Lucknow Accident: ಟ್ರಕ್-ಟ್ಯಾಂಕರ್ ನಡುವೆ ಭೀಕರ ಡಿಕ್ಕಿ, 6 ಮಂದಿ ಸಾವು
Lucknow Accident: ಲಕ್ನೋದ ಬಂತ್ರಾ ಪ್ರದೇಶದ ಲತೀಫ್ನಗರ ಬಳಿ ಲೋಡರ್ ಟ್ರಕ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದಾರೆ
ಲಕ್ನೋ: ಲಕ್ನೋದ ಬಂತ್ರಾ ಪ್ರದೇಶದ ಲತೀಫ್ನಗರ ಬಳಿ ಲೋಡರ್ ಟ್ರಕ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಈ ಮಾಹಿತಿ ನೀಡಿದ್ದಾರೆ.
ಶನಿವಾರ ಮುಂಜಾನೆ ಲತೀಫ್ನಗರದ ಹರೌನಿ ಮೋಹನ್ ರಸ್ತೆಯಲ್ಲಿ ಓವರ್ಟೇಕ್ ಮಾಡುವಾಗ ಲೋಡರ್ ಟ್ರಕ್ ತೈಲ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಲೋಡರ್ ಲಾರಿಯಲ್ಲಿ 12 ಮಂದಿ ಇದ್ದರು.
ಮೃತರಲ್ಲಿ ಶೈಲೇಂದ್ರ (35), ರಾಮಧರ್ (15), ಪುರುಷೋತ್ತಮ್ (23), ಜಯಕರನ್ (16), ಸಂಭರ್ (13) ಮತ್ತು ರಾಹುಲ್ (13) ಸೇರಿದ್ದಾರೆ. ಗಾಯಗೊಂಡ ಆರು ಮಂದಿಯನ್ನು ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಲೋಡರ್ ಟ್ರಕ್ನಲ್ಲಿದ್ದ ಎಲ್ಲಾ 12 ಜನರು ಹರ್ದೋಯ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೈಲ ಟ್ಯಾಂಕರ್ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ವಾಹನ ಅಪಘಾತದಿಂದ ಜನರು ಸಾವನ್ನಪ್ಪಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಾರ, ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದರು.
Lucknow Fatal collision in loader truck-tanker 6 killed
Follow Us on : Google News | Facebook | Twitter | YouTube