ಚುನಾವಣೆ ಗೆಲ್ಲಲು ವಾಮಾಚಾರ ಮಾಡಿದ ಕಿಡಿಗೇಡಿಗಳು

ಒಂದು ಕಡೆ ಗ್ರಾಮಪಂಚಾಯಿತಿಗೆ ಚುನಾವಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಗೆಲುವಿಗಾಗಿ ಕೆಲವರು ವಾಮಾಚಾರ, ಮಾಟ ಮಂತ್ರದ ಮೊರೆ ಹೋಗಿರುವುದು ತಾಲೂಕಿನ ಶ್ಯಾನಾಡ್ರಹಳ್ಳಿಯಲ್ಲಿ ನಡೆದಿದೆ

(Kannada News) : ಗುಂಡ್ಲುಪೇಟೆ: ಒಂದು ಕಡೆ ಗ್ರಾಮಪಂಚಾಯಿತಿಗೆ ಚುನಾವಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಗೆಲುವಿಗಾಗಿ ಕೆಲವರು ವಾಮಾಚಾರ, ಮಾಟ ಮಂತ್ರದ ಮೊರೆ ಹೋಗಿರುವುದು ತಾಲೂಕಿನ ಶ್ಯಾನಾಡ್ರಹಳ್ಳಿಯಲ್ಲಿ ನಡೆದಿದೆ.

ಪಡಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಶ್ಯಾನಾಡ್ರಹಳ್ಳಿ ಗ್ರಾಮದಲ್ಲಿ ಅಭ್ಯರ್ಥಿಗಳು ಹಲವು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನದ ನಡೆಯುವ ಮುನ್ನ ದಿನವಾದ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಗ್ರಾಮದ ಪ್ರಮುಖ ನಾಯಕರಾದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಮೃತ್ಯುಂಜಯ ಹಾಗೂ ಗ್ರಾಮದ ಎಲ್ಲಾ ಕೇರಿಯ ಪ್ರಮುಖ ಬೀದಿ ಗಳಲ್ಲಿ ನಿಂಬೆಹಣ್ಣು ಕುಡುಕೆ ಇಟ್ಟು ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.

ಈ ಕುರಿತು ಮೃತ್ಯುಂಜಯ ಅವರು ಪ್ರತಿಕ್ರಿಯೆ ನೀಡಿ ನಮ್ಮ ಮನೆ ಹತ್ತಿರ ಯಾರೋ ನಿಂಬೆಹಣ್ಣು ಕುಂಕುಮ ಹಚ್ಚಿರುವ ಕುಡುಕೆಗಳನ್ನು ಇಟ್ಟಿದ್ದಾರೆ.

ನಮ್ಮ ಗ್ರಾಮದಲ್ಲಿ ಇದೇ ಮೊದಲ ಸಲ ಈ ಮಾಠಮಂತ್ರ ನಡೆಸಿ ಭಯದ ವಾತಾವರಣ ಸೃಷ್ಠಿ ಮಾಡಿದ್ದಾರೆ ಆದರೆ ಗ್ರಾಮದ ಜನತೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಸ್.ಎಂ.ಮಲ್ಲಿಕಾರ್ಜುನ ಅವರು ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಯಾರು ಶ್ರಮಿಸಿದ್ದಾರೆ. ಅವರನ್ನು ಜನರು ಮತ ನೀಡುವ ಮೂಲಕ ಆಯ್ಕೆ ಮಾಡುತ್ತಾರೆ ಇಂತಹ ಭಯದ ವಾತಾವರಣ ಸೃಷ್ಟಿಸಿ ಗೆಲುವು ಸಾಧಿಸಲಾಗದು ಎಂದು ಹೇಳಿದ್ದಾರೆ.

Web Title : Made sorcery to win the election