ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ : ಸಂಪತ್​ ರಾಜ್ ಕೊನೆಗೂ ಸಿಸಿಬಿ ಬಲೆಗೆ

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂಪತ್​ ರಾಜ್ ರನ್ನು ಕೊನೆಗೂ ಸಿಸಿಬಿ ಬಂಧಿಸಿದ್ದಾರೆ.

ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ : ಸಂಪತ್​ ರಾಜ್ ಕೊನೆಗೂ ಸಿಸಿಬಿ ಬಲೆಗೆ

( Kannada News Today ) : ಬೆಂಗಳೂರು : ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಕೊನೆಗೂ ಸಿ.ಸಿ.ಬಿ ಕೈಗೆ ತಗಲಾಕ್ಕೊಂಡವ್ರೆ. ಚಾರ್ಜ್‌ಶೀಟ್ ಸಲ್ಲಿಸಿದ ದಿನ ಕಾಲ್ಕಿತ್ತಿದ್ದ ಮಾಜಿ ಮೇಯರಪ್ಪ, ಹಂಗೋ ಇಂಗೋ ಸಿಸಿಬಿ ಪೊಲೀಸ್ರ ಗಾಳಕ್ಕೆ ಸಿಕ್ಕಿಬಿದ್ದವ್ರೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಈ ಮಾಜಿ ಮೇಯರ್ ಸಂಪತ್ ರಾಜ್.

ನಾವೇನು ಬಿಹಾರದಲ್ಲಿದ್ದೇವೋ, ಪಾಕಿಸ್ಥಾನದಲ್ಲಿದ್ದೇವೋ ಒಂದು ಕ್ಷಣ ನಮಗೆ ನಂಬಲಾಗದ ರೀತಿ ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಸೃಷ್ಟಿಯಾಗಿತ್ತು. ಆಗಸ್ಟ್ 11ರ ಸಂಜೆ  ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ಗಲಭೆ ಆತಂಕ ಸೃಷ್ಟಿಸಿತ್ತು.

ಅಲ್ಲಿ ಗಲಭೆಗೆ ವಿವಾದಾತ್ಮಕ ಪೋಸ್ಟ್ ಕಾರಣವಾಗಿತ್ತು ಎಂಬುದು ಮೇಲ್ನೋಟಕ್ಕೆ ಮಾತ್ರ ಆದ್ರೂ ಇದೊಂದು ಫ್ರೀ ಪ್ಲಾನ್ ಇರಬಹುದಾ ಅನ್ನೋ ಅನುಮಾನ ಇದ್ದೇ ಇತ್ತು.

ಅದು ಯಾವ್ ರೀತಿ ಗಲಭೆ ಅಂದ್ರೆ ಪೊಲೀಸ್ ಠಾಣೆಯನ್ನ ಸಹ ಧ್ವಂಸ ಮಾಡಲಾಗಿತ್ತು, ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಧಗಧಗಿಸಿ ಹೋಗಿತ್ತು.

ಅಬ್ಬಾ… ಏನು ದ್ವೇಷ, ಏನು ಕೋಪ… ಅಂದ್ರೆ ನಿಜಕ್ಕೂ ಆ ವಿವಾದಾತ್ಮಕ ಪೋಸ್ಟ್ ಮಾತ್ರ ಇದಕ್ಕೆ ಕಾರಣನಾ ?

ಹೋಗ್ಲಿ ಬಿಡಿ, ಈ ಪ್ರಕರಣವನ್ನ ಚಾಲೆಂಜ್​ ಆಗಿ ತೆಗೆದುಕೊಂಡ ನಮ್ಮ್ ಬೆಂಗಳೂರು ಪೊಲೀಸರು ಈಗಾಗಲೇ ಮಂದೆ ಮಂದೆ ಆರೋಪಿಗಳನ್ನ ಬಂಧಿಸಿ ಜೈಲುಗಟ್ಟವ್ರೇ… ಈಗ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಕೂಡ ಸಿ.ಸಿ.ಬಿ ಬಲೆಗೆ ಬಿದ್ದವ್ರೆ… ಇನ್ನೇನಿದ್ರೂ ಪೊಲೀಸ್ ಡ್ರಿಲ್ ಮಾತ್ರ ಬಾಕಿ

ಸದ್ಯಕ್ಕೆ ಸಿಸಿಬಿ ವಶದಲ್ಲಿರುವ ಸಂಪತ್ ರಾಜ್​ರನ್ನ ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

Web Title : main accused in the KJ Halli-DJ Halli Case Sampath Raj arrested

Scroll Down To More News Today