ಮಾಲೂರು : 10ನೇ ತರಗತಿ ವಿಧ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ- ಅತ್ಯಾಚಾರದ ಶಂಕೆ

Malur Bandh - Girl Kidnapped And Raped In Malur | Malur News Kannada

ಕನ್ನಡ ನ್ಯೂಸ್ – Kannada News – Malur – ಮಾಲೂರು : 10ನೇ ತರಗತಿ ವಿಧ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ- ಅತ್ಯಾಚಾರದ ಶಂಕೆ – Malur Bandh – Girl Kidnapped And Raped In Malur

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 10 ನೆ ತರಗತಿ ವಿದ್ಯಾರ್ಥಿನಿಯನ್ನು ಅಪರಿಚಿತ ವ್ಯಕ್ತಿ ಎಳೆದುಕೊಂಡು ಹೋಗಿ ಕೊಲೆ ಮಾಡಿರುವ ಭೀಕರ ಘಟನೆ ಮಾಲೂರಿನಲ್ಲಿ ನಡೆದಿದೆ.

ಮಾಲೂರು : 10ನೇ ತರಗತಿ ವಿಧ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ- ಅತ್ಯಾಚಾರದ ಶಂಕೆ

ಮಾಲೂರು : ಇನ್ನು ಬಾಲಕಿ ಮೇಲೆ ದುಷ್ಕರ್ಮಿ ಅತ್ಯಾಚಾರ ನಡೆಸಿರಬಹುದಾದ ಶಂಕೆ ವ್ಯಕ್ತವಾಗಿದ್ದು ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕೋಲಾರ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮೃತ ಬಾಲಕಿ ಮಾಲೂರು ಬಿಜಿಎಸ್‌ ಶಾಲೆಯ 10ನೇ ತರಗತಿ ವಿಧ್ಯಾರ್ಥಿನಿ

ಮೃತ ಬಾಲಕಿಯನ್ನು ಬಿಜಿಎಸ್‌ ಶಾಲೆಯ 10ನೇ ತರಗತಿ ವಿಧ್ಯಾರ್ಥಿನಿ ರಕ್ಷಿತಾ ಎನ್ನಲಾಗಿದ್ದು, ಮಾಲೂರಿನ ಇಂದಿರಾ ನಗರ ನಿವಾಸಿ ಎಂದು ತಿಳಿದು ಬಂದಿದೆ.

ಬಾಲಕಿ ಎಂದಿನಂತೆ ಶಾಲೆ ಮುಗಿಸಿ ತನ್ನ ಸ್ನೇಹಿತೆ ಜೊತೆಗೆ ತನ್ನ ಮನೆಗೆ ಹೋಗುವ ಕಾಲು ದಾರಿಯಲ್ಲಿ ಸಾಗಿದ್ದಾಳೆ, ಮಾರ್ಗ ಮದ್ಯೆ ಅಪರಿಚಿತ ವ್ಯಕ್ತಿ ಬಾಲಕಿಯನ್ನ್ನು ಎಳೆದಾಡಿ ಕರೆದೊಯ್ದಿದ್ದಾನೆ. ಗಾಬರಿಯಾದ ಬಾಲಕಿ ಸ್ನೇಹಿತೆ ಅಲ್ಲಿಂದ ಓಡಿ ಹೋಗಿದ್ದಾಳೆ.

ಮಾಲೂರು : 10ನೇ ತರಗತಿ ವಿಧ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ- ಅತ್ಯಾಚಾರದ ಶಂಕೆ - Kannada News

ಮಗಳನ್ನು ಹುಡುಕಿ ಹೋರಾಟ ತಂದೆಗೆ ಮಗಳು ಸಿಕ್ಕಿದ್ದು ಶವವಾಗಿ –

ಇತ್ತ ಬಾಲಕಿಯ ಪೋಷಕರು ಸಂಜೆಯಾದರೂ ಮಗಳು ಬಾರದಿದ್ದನ್ನು ನೋಡಿ, ಹುಡುಕಿಕೊಂಡು ಹೋಗಿದ್ದಾರೆ. ಬಾಲಕಿಯನ್ನು ಹುಡಿಕಿ ಹೋದ ಬಾಲಕಿಯ ತಂದೆಗೆ ಪೊದೆ ಸಮೀಪ ಮಗಳ ಶವ ಪತ್ತೆಯಾಗಿದೆ. ಮಾಲೂರು : 10ನೇ ತರಗತಿ ವಿಧ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ- ಅತ್ಯಾಚಾರದ ಶಂಕೆ-itsKannada

ಬಾಲಕಿ ಶವದ ಮೇಲೆ ಪರಚಿದ ಗಾಯಗಳಾಗಿದ್ದು, ಅತ್ಯಾಚಾರ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂದೆ ಸಾವಿರಾರು ಜನರು ಜಮಾಯಿಸಿದರು. ಬಾಲಕಿ ಹತ್ಯೆ ನಡೆದ ಪ್ರದೇಶದಲ್ಲಿ ಹಂತಕನಿಗಾಗಿ ಹುಡುಕಾಟ ನಡೆಸಲಾಯಿತು.

ನಿನ್ನೆ ಸಂಜೆ ಮಾಲೂರು ಪಟ್ಟಣದ ರೈಲ್ವೆ ಸೇತುವೆ ಹಿಂಭಾಗದಲ್ಲಿ ಕೊಲೆ ನಡೆದಿದ್ದು, ಆರೋಪಿಗಳ ಶೋಧಕ್ಕಾಗಿ ಇನ್​ಸ್ಪೆಕ್ಟರ್​ ಸತೀಶ್​, ಪಿಎಸ್​ಐ ಮುರಳಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಲೂರಿನಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಾಲಕಿ ಹತ್ಯೆಯನ್ನು ಖಂಡಿಸಿ ಮತ್ತು ಕೊಲೆಗಾರನ ಬಂಧನಕ್ಕೆ ಆಗ್ರಹಿಸಿ ನಾನಾ ಸಂಘಟನೆಗಳು  ಮಾಲೂರು ಬಂದ್‌

ಮಗಳನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲುಮುಟ್ಟಿತ್ತು. ಇನ್ನು ಬಾಲಕಿಯ ಹತ್ಯೆಯನ್ನು ಖಂಡಿಸಿ ಮತ್ತು ಕೊಲೆಗಾರನ ಬಂಧನಕ್ಕೆ ಆಗ್ರಹಿಸಿ ನಾನಾ ಸಂಘಟನೆಗಳು  ಮಾಲೂರು ಬಂದ್‌ಗೆ ಕರೆ ನೀಡಿವೆ. ಇನ್ನು ಮುಗ್ದ ಬಾಲಕಿಯ ಕೊಲೆ ವಿಷಯ ಇಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಬಾಲಕಿ ಹತ್ಯೆ ಖಂಡಿಸಿ ಜಾಲತಾಣದಲ್ಲಿ ಅಭಿಯಾನ:
ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿರುವ ರಕ್ಷಿತಾ ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ರಕ್ಷಿತಾ ಅಭಿಯಾನ ಆರಂಭಿಸಲಾಗಿದೆ. ಮಾಲೂರು ತಾಲೂಕು ವಿಧ್ಯಾರ್ಥಿ ಸಂಘಟನೆಗಳಿಂದ ನ್ಯಾಯಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ.////////

WebTitle : girl kidnapped and raped in malur –ಮಾಲೂರು : 10ನೇ ತರಗತಿ ವಿಧ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ- ಅತ್ಯಾಚಾರದ ಶಂಕೆ

Keyword – sslc girl murdered in malur, kolar district – Malur Bandh – girl kidnapped and raped in malur – Malur News Kannada

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Malur News Kannada 

Follow us On

FaceBook Google News