ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿ ಅರೆಸ್ಟ್

Malur girl murder case accused arrest by Malur police

ಕನ್ನಡ ನ್ಯೂಸ್ – Kannada News : Malur – ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿ ಅರೆಸ್ಟ್ – Malur police have arrested a 22-year-old for hacking a school girl to death.

ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದಿದ್ದ  ಹತ್ಯಾಚಾರ ಹಾಗೂ ಹತ್ಯೆ ಸಂಬಂದ ಮಾಲೂರು ಪೊಲೀಸರು
ಆರೊಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದಿನ ಸುದ್ದಿಯನ್ನು ಓದಿಲ್ಲವಾದರೆ ಓದಲು ಕ್ಲಿಕ್ಕಿಸಿ >>
10ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾಳನ್ನು ಬರ್ಬರವಾಗಿ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಮಾಲೂರಿನಾಧ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು, ಈ ಒಂದು ಪ್ರಕರಣವನ್ನು ಚಾಲೆಂಜ್ ಆಗಿ ತೆಗೆದು ಕೊಂಡ ಮಾಲೂರು ಪೊಲೀಸರು ಆರೋಪಿ ಕೊಲೆಗಡುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿ ಅರೆಸ್ಟ್-itsKannada
ಕೊಲೆಗಾರ : ಟಿ.ಬಾಬು
ಬಂಧಿತ ಆರೋಪಿಯನ್ನು ಟಿ.ಬಾಬು (22) ಅಲಿಯಾಸ್ ಸೂರಿ S%o ನಾರಾಯಣಸ್ವಾಮಿ ಎಂದು ಗುರುತಿಸಲಾಗಿದ್ದು ಈತ ಟೇಕಲ್ ನಿವಾಸಿ ಎಂದು ತಿಳಿದು ಬಂದಿದೆ. ಇವನು ಮೃತ ಬಾಲಕಿಯ ಮನೆ ಸಮೀಪವೇ ಗಾರೆ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದ್ದು, ಕೊಲೆಯ ದಿವಸ ಕೆಲಸಕ್ಕೆ ಬರಲಿಲ್ಲ ಎಂದೂ ಗೊತ್ತಾಗಿದೆ.
ಹಲವು ಬಾರಿ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದ್ದು , ಬಾಲಕಿ ಅದಕ್ಕೆ ನಿರಾಕರಿಸಿ ಬೈದು ಬುದ್ದಿ ಹೇಳಿದ್ದಳು ಎಂದು ತಿಳಿದು ಬಂದಿದೆ.

Malur police arrested T. Babu (Suri) who killed 15-year-old Class 10th student in Malur, Kolar district

ರೇಖಾಚಿತ್ರದ ಆಧಾರದಲ್ಲಿ ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿಯ ಬಂಧನ
ರೇಖಾ ಚಿತ್ರದ ಆಧಾರ ಟಿ.ಬಾಬು ಬಂಧನವಾಗಿದ್ದು ಕೊಲೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಸಧ್ಯ ಆರೋಪಿಯನ್ನು ಇಂದು ನ್ಯಾಯಾಲೆಯದೆದುರು ಹಾಜರುಪಡಿಸಲು ಪೋಲೀಸರು ನಿರ್ಧರಿಸಿದ್ದಾರೆ.

Malur girl murder case accused arrest by Malur police

ಘಟನೆ : ಮಾಲೂರು ವಿಧ್ಯಾರ್ಥಿನಿ ಕೊಲೆ ಪೂರ್ಣ ಘಟನೆಯ ವಿವರ – 

Kolar District Student Rape And Murder Case The Accused Was Arrested By Malur Police-itsKannada
ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಿಜೆಎಸ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾಳನ್ನು ಅಪಹರಿಸಿದ ದುಷ್ಕರ್ಮಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದನು. 
ಆಕೊಲೆಗಾರನನ್ನು ಬಂಧಿಸುವಂತೆ ಆಗ್ರಹಿಸಿ ಮಾಲೂರು ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಮಾಲೂರಿನಲ್ಲಿ  ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದರು.
Malur Police Arrested T.Babu (Suri) Who Killed 15-Year-Old Class 10th Student In Malur, Kolar District-itsKannada

ಮಾಲೂರು ವಿಧ್ಯಾರ್ಥಿನಿ ಕೊಲೆಗಾರನ ಸುಳಿವು ಸಿಕ್ಕಿದ್ದು – ಹೇಗೆ ?

ರೇಖಾಚಿತ್ರ ಒಂದೆಡೆಯಾದರೆ , ಮತ್ತೊಂದೆಡೆ ಪೊಲೀಸರು ಈ ಪ್ರಕರಣವನ್ನು ಚಾಲೆಂಚ್ ಆಗಿ ತೆಗೆದು ಕೊಂಡು ಎಲ್ಲಾ ಆಂಗಲ್ ನಲ್ಲಿ ಕೊಲೆಗಾರನ ಸುಳಿವಿಗೆ ಬಲೆ ಬೀಸಿದ್ದರು.

ಕೊಲೆ ಮಾಡಿದ ಆರೋಪಿ ಸಿಕ್ಕಿದ್ದು ಎಲ್ಲಿ , ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿ ಸಿಕ್ಕಿದ್ದು ಹೇಗೆ ?

 

ಕೊಲೆಯ ನಂತರ ತನಗೇನು ಗೊತ್ತಿಲ್ಲ ಎಂಬಂತೆ ಟೇಕಲ್ ನ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದಾನೆ , ಅನುಮಾನಗೊಂಡ ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ವಿಚಾರಿಸಿದಾಗ , ನಿಜ ಬಾಯ್ಬಿಟ್ಟಿದ್ದಾನೆ.

ಸಧ್ಯ ಆರೋಪಿ ಸಹ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ. ///

ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿ ಅರೆಸ್ಟ್ - Kannada News

WebTitle : ಮಾಲೂರು ವಿಧ್ಯಾರ್ಥಿನಿ ಕೊಲೆ ಆರೋಪಿ ಅರೆಸ್ಟ್ – Malur girl murder case accused arrest by Malur police

Kolar District Student Rape And Murder Case: The Accused Was Arrested by Malur Police – Malur police arrested T.Babu (Suri) who killed 15-year-old Class 10th student in Malur, Kolar district – Malur police arrested T. Babu (Suri) who killed 15-year-old Class 10th student in Malur, Kolar district

Follow us On

FaceBook Google News

Read More News Today