ಬಾಲಕಿ ಮೇಲೆ ಅತ್ಯಾಚಾರ ಯತ್ನ, ಕಾಮುಕ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ ?

Man arrested for molesting 7-year-old in Saidabad

( Kannada News Today ) : Crime News

ಹೈದರಾಬಾದ್ : ಹೈದರಾಬಾದ್‌ನ ಸೈದಾಬಾದ್‌ನಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾಮುಕ ಆರೋಪಿ ದಾಸು ಎಂದು ಗುರುತಿಸಲಾಗಿದೆ.

ಸೈದಾಬಾದ್ ಪೊಲೀಸರ ಪ್ರಕಾರ, ಬಾಲಕಿ ರಜೆಯ ನಿಮಿತ್ತ ತನ್ನ ಅಜ್ಜಿಯ ಮನೆಗೆ ಭೇಟಿ ನೀಡಿದ್ದಳು. ಅಜ್ಜಿಯ ಮನೆ ಮುಂದೆ ಬಾಲಕಿ ಹೊರಗೆ ಆಟವಾಡುವುದನ್ನು ದಾಸು ಗಮನಿಸಿದ್ದಾನೆ. ಸುತ್ತ ಮುತ್ತ ಯಾರೂ ಇಲ್ಲದಿದ್ದಾಗ, ಆತ ಬಾಲಕಿ ಬಳಿ ಬಂದು, ಪುಸಲಾಯಿಸಿ ಅದೇ ಕಟ್ಟಡದ ಮೂರನೇ ಮಹಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ವಯಸ್ಸಿನಲ್ಲಿ ಕಿರಿಯಳಾದರೂ ಎಚ್ಚೆತ್ತುಕೊಂಡ ಬಾಲಕಿ ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾಳೆ.

ಬಾಲಕಿ ಮೇಲೆ ಅತ್ಯಾಚಾರ ಯತ್ನ, ಕಾಮುಕ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ
ಅತ್ಯಾಚಾರ ಆರೋಪಿ

ಬಾಲಕಿಯ ಕಿರುಚುವಿಕೆಗೆ ಗಾಬರಿಗೊಂಡ ಕಾಮುಕ ಸ್ಥಳದಿಂದ ಓಡಿಹೋಗಿದ್ದಾನೆ.. ನಂತರ ಬಾಲಕಿ ಮನೆಗೆ ಮರಳಿದ್ದು ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ.ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಕಿರುಕುಳ ಮತ್ತು ಅಪಹರಣ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ.

Web Title : Man arrested for molesting 7-year-old in Saidabad
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube ಅನುಸರಿಸಿ.