Man Thrashes Cop Video: ನೋಡ ನೋಡುತ್ತಲೇ ಲಾಠಿ ಹಿಡಿದು ಪೊಲೀಸನ್ನು ಥಳಿಸಿದ ವ್ಯಕ್ತಿ

Man Thrashes Cop : ಎಲ್ಲರೂ ನೋಡ ನೋಡುತ್ತಲೇ ವ್ಯಕ್ತಿಯೊಬ್ಬ ಪೊಲೀಸರಿಂದ ಲಾಠಿ ಕಸಿದುಕೊಂಡು ಆತನನ್ನು ತಳಿಸಿದ್ದಾನೆ. ಹಲವು ಬಾರಿ ಬೆನ್ನಟ್ಟಿ ಹೊಡೆದಿದ್ದಾನೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.

Online News Today Team

ಭೋಪಾಲ್: ಎಲ್ಲರೂ ನೋಡ ನೋಡುತ್ತಲೇ ವ್ಯಕ್ತಿಯೊಬ್ಬ ಪೊಲೀಸರಿಂದ ಲಾಠಿ ಕಸಿದುಕೊಂಡು ಆತನನ್ನು ತಳಿಸಿದ್ದಾನೆ. ಹಲವು ಬಾರಿ ಬೆನ್ನಟ್ಟಿ ಹೊಡೆದಿದ್ದಾನೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.

ಶುಕ್ರವಾರ ವೆಂಕಟೇಶ್ ನಗರ ಪ್ರದೇಶದಲ್ಲಿ 25 ವರ್ಷದ ದಿನೇಶ್ ಪ್ರಜಾಪತಿ ಮತ್ತು ಪೊಲೀಸ್ ಪೇದೆ ಜೈ ಪ್ರಕಾಶ್ ಜೈಸ್ವಾಲ್ ಅವರ ಬೈಕ್‌ಗಳು ಲಘುವಾಗಿ ಡಿಕ್ಕಿ ಹೊಡೆದಿವೆ. ಇದರಿಂದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಆದರೆ, ಅಪಘಾತದಿಂದ ಕೆರಳಿದ ದಿನೇಶ್, ಕಾನ್ಸ್‌ಟೇಬಲ್ ಜೈಸ್ವಾಲ್‌ನಿಂದ ಲಾಠಿ ಕಸಿದುಕೊಂಡು ಹಲ್ಲೆ ನಡೆಸಿದ್ದಾನೆ.

ಪೊಲೀಸನ್ನು ಥಳಿಸಿದ ವ್ಯಕ್ತಿಅಷ್ಟೇ ಅಲ್ಲದೆ ಪೊಲೀಸ್ ಅನ್ನು ಹಿಂಬಾಲಿಸಿ ಹಲವಾರು ಬಾರಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ದೊಣ್ಣೆಯಿಂದ ಪೊಲೀಸರ ತಲೆಗೆ ಹೊಡೆದಿದ್ದಾನೆ. ಅಲ್ಲಿ ಎಲ್ಲರೂ ಮೊಬೈಲ್ ಹಿಡಿದು ಚಿತ್ರೀಕರಿಸುತ್ತಿದ್ದರೇ ಹೊರತು ಕಾನ್ ಸ್ಟೇಬಲ್ ರಕ್ಷಣೆಗೆ ಯಾರೂ ಮುಂದಾಗಲಿಲ್ಲ.

ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಪೇದೆ ಜೈ ಪ್ರಕಾಶ್ ಜೈಸ್ವಾಲ್ ದೂರು ದಾಖಲಿಸಿದ್ದಾರೆ. ಪೊಲೀಸರು ದಿನೇಶ್ ಪ್ರಜಾಪತಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಕೆಲ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಫಸ್ಟ್ ಹಾಪ್, ಇನ್ನು ಬಂಧಿಸಿರುವ ಆ ವ್ಯಕ್ತಿಯ ಸೆಕೆಂಡ್ ಹಾಪ್ ಏನು ಅಂತ ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ…… ಪೊಲೀಸ್ ಠಾಣೆಯಲ್ಲಿ ಅವನಿಗೆ ಫುಲ್ ಟ್ರೀಟ್ ಮೆಂಟ್…

Man arrested for thrashing cop

Follow Us on : Google News | Facebook | Twitter | YouTube