ಮುಂದೆ ಪೊಲೀಸ್ ಆಗಬೇಕಿದ್ದ ಯುವತಿ ಮೇಲೆ ಫೇಸ್‌ಬುಕ್‌ ಸ್ನೇಹಿತನಿಂದ ಅತ್ಯಾಚಾರ

ಫೇಸ್ ಬುಕ್ ಕಾಂಟ್ಯಾಕ್ಟ್, ಆನ್ ಲೈನ್ ಫ್ರೆಂಡ್ ಶಿಪ್ ನಂಬಬೇಡಿ ಎಂದು ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಬದಲಾಗುವುದಿಲ್ಲ. ಮುಖ ಪರಿಚಯ ಇಲ್ಲದವರನ್ನು ಸಹ ಕುರುಡಾಗಿ ನಂಬುತ್ತಾರೆ ಮತ್ತು ಅಪಾಯಗಳನ್ನು ಎದುರಿಸುತ್ತಾರೆ.

ಫೇಸ್ ಬುಕ್ ಕಾಂಟ್ಯಾಕ್ಟ್, ಆನ್ ಲೈನ್ ಫ್ರೆಂಡ್ ಶಿಪ್ ನಂಬಬೇಡಿ ಎಂದು ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಬದಲಾಗುವುದಿಲ್ಲ. ಮುಖ ಪರಿಚಯ ಇಲ್ಲದವರನ್ನು ಸಹ ಕುರುಡಾಗಿ ನಂಬುತ್ತಾರೆ ಮತ್ತು ಅಪಾಯಗಳನ್ನು ಎದುರಿಸುತ್ತಾರೆ.

ಇತ್ತೀಚೆಗೆ ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನನ್ನು ನಂಬಿ ತನ್ನ ದುಃಖವನ್ನು ವ್ಯಕ್ತಪಡಿಸಿದ್ದಳು. ಆಗ ಯುವಕ ಆಕೆಗೆ ಕೆಲಸ ಕೊಡಿಸುವುದಾಗಿ ಕೋಣೆಗೆ ಕರೆಯಿಸಿ ಕೊಂಡು ಅತ್ಯಾಚಾರವೆಸಗಿದ್ದಾನೆ. ಈ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ವಿವರಗಳಿಗೆ ಹೋಗುವುದಾದರೆ.. ಮಧ್ಯಪ್ರದೇಶದ ಯುವತಿಯೊಬ್ಬಳು ಪೊಲೀಸ್ ಉದ್ಯೋಗಕ್ಕಾಗಿ ಬೇರೆ ನಗರದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಅಲ್ಲಿ ಫ್ರೆಂಡ್ಸ್ ಇಲ್ಲದ ಕಾರಣ ಫೇಸ್ ಬುಕ್ ನಲ್ಲಿ ಹೆಚ್ಚಾಗಿ ಇರುತ್ತಿದ್ದಳು.

ಕೆಲ ದಿನಗಳ ಹಿಂದೆ ಆಕೆಗೆ ಫೇಸ್ ಬುಕ್ ನಲ್ಲಿ ಯುವಕನೊಬ್ಬನ ಪರಿಚಯವಾಗಿತ್ತು. ಆ ಪರಿಚಯ ಸ್ವಲ್ಪಮಟ್ಟಿಗೆ ಸ್ನೇಹಮಯವಾಯಿತು. ಯುವತಿ ತನ್ನ ದುಃಖವನ್ನು ಯುವಕನೊಂದಿಗೆ ಹಂಚಿಕೊಳ್ಳುತ್ತಿದ್ದಳು.

ತನಗೆ ನೌಕರಿ ಬೇಕು ಮತ್ತು ಆರ್ಥಿಕ ತೊಂದರೆ ಇದೆ ಎಂದು ಹೇಳಿಕೊಂಡಿದ್ದಳು. ಅದನ್ನೇ ಲಾಭ ಮಾಡಿಕೊಂಡ ಕಾಮುಕ ಸ್ನೇಹಿತ ಗಾಲ್ವಿಯರ್ ನಲ್ಲಿ ಕೆಲಸ ಇದೆ, ಸರ್ಟಿಫಿಕೇಟ್ ತೆಗೆದುಕೊಂಡು ಸಂದರ್ಶನಕ್ಕೆ ಬಾ ಎಂದು ಕರೆದಿದ್ದಾನೆ.

ಆತನನ್ನು ನಂಬಿದ ಯುವತಿ ಆತ ಹೇಳಿದ ಹೋಟೆಲ್‌ಗೆ ಹೋಗಿದ್ದಾಳೆ, ಆ ನಂತರ ಆಕೆಯನ್ನು ಹೆದರಿಸಿ ಅತ್ಯಾಚಾರ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದರೊಂದಿಗೆ ಯುವತಿ ಮೌನವಾಗಿ ಮನೆ ತಲುಪಿದ್ದಾಳೆ. ಆದರೂ ಸರ್ಟಿಫಿಕೇಟ್ ಗಳನ್ನು ಅವನಲ್ಲೇ ಬಿಟ್ಟು ಬಂದಿದ್ದಳು, ಮತ್ತೊಮ್ಮೆ ಕರೆ ಮಾಡಿ ಸರ್ಟಿಫಿಕೇಟ್ ಕೊಡಿ ಎಂದು ಕೇಳಿದ್ದಾಳೆ.

ಮತ್ತೊಮ್ಮೆ ಅವರ ಆಸೆ ಈಡೇರಿಸಿದರೆ ಕೊಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಇದರೊಂದಿಗೆ ಯುವತಿ ಅವನ ಬಳಿಗೆ ಹೋಗಿದ್ದಾಳೆ… ಈ ಬಾರಿಯೂ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊನೆಗೆ ಸರ್ಟಿಫಿಕೇಟ್ ಇಲ್ಲ, ಯಾವುದೂ ಇಲ್ಲ ಎಂದು ಹುಡುಗಿಯನ್ನು ಗದರಿಸಿ ಕಳುಹಿಸಿದ್ದಾನೆ.

ಬೇರೆ ದಾರಿ ಕಾಣದೆ ಆಕೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today