ಶಾಪಿಂಗ್ ಮಾಲ್‌ನ ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

ವ್ಯಕ್ತಿಯೊಬ್ಬರು ಶಾಪಿಂಗ್ ಮಾಲ್‌ನ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಎರಡನೇ ಮಹಡಿಯಿಂದ ಬಿದ್ದ ಆತ ಯುವತಿಯ ಮೇಲೆ ಬಿದ್ದಿದ್ದಾನೆ.. ಆತ ಬಿದ್ದ ರಭಸಕ್ಕೆ ಆಕೆ ಗಾಯಗೊಂಡಿದ್ದಾಳೆ.

ಜೈಪುರ: ವ್ಯಕ್ತಿಯೊಬ್ಬರು ಶಾಪಿಂಗ್ ಮಾಲ್‌ನ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಎರಡನೇ ಮಹಡಿಯಿಂದ ಬಿದ್ದ ಆತ ಯುವತಿಯ ಮೇಲೆ ಬಿದ್ದಿದ್ದಾನೆ.. ಆತ ಬಿದ್ದ ರಭಸಕ್ಕೆ ಆಕೆ ಗಾಯಗೊಂಡಿದ್ದಾಳೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಈ ಘಟನೆ ನಡೆದಿದೆ. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಶಾಪಿಂಗ್ ಮಾಲ್‌ನಲ್ಲಿ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ಈ ಹಿನ್ನೆಲೆಯಲ್ಲಿ ಮಾಲ್‌ನ ಎರಡನೇ ಮಹಡಿಯಿಂದ ವ್ಯಕ್ತಿಯೊಬ್ಬ ಬಿದ್ದಿದ್ದಾನೆ.

ಅಲ್ಲಿದ್ದವರು ತಕ್ಷಣ ಆತನ ಬಳಿ ಹೋಗಿ ನೋಡಿದಾಗ ಆತ ಮೃತಪಟ್ಟಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಯುವತಿ ಮೇಲೆ ಬಿದ್ದಿದ್ದರಿಂದ ಆಕೆ ಗಾಯಗೊಂಡಿದ್ದಾಳೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆಕಸ್ಮಿಕವಾಗಿ ಎರಡನೇ ಮಹಡಿಯಿಂದ ಬಿದ್ದಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಘಟನೆಯ ಕುರಿತು ಸ್ಪಷ್ಟನೆ ಬರಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನಾಳೆಯ ದಿನಭವಿಷ್ಯ

Follow Us on : Google News | Facebook | Twitter | YouTube