ಆನೆ ದಾಳಿಗೆ ವ್ಯಕ್ತಿ ಸಾವು

ಚಿತ್ತೂರು ಜಿಲ್ಲೆಯಲ್ಲಿ ಧಾರುಣ ಘಟನೆ ನಡೆದಿದೆ. ಆನೆ ದಾಳಿಗೆ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೊಡ್ಡ ಪಂಜನಿ ವಲಯದ ಪೆನುಗೋಳಕಳ ಗ್ರಾಮದಲ್ಲಿ ನಡೆದಿದೆ.

Online News Today Team

ಅಮರಾವತಿ: ಚಿತ್ತೂರು ಜಿಲ್ಲೆಯಲ್ಲಿ ಧಾರುಣ ಘಟನೆ ನಡೆದಿದೆ. ಆನೆ ದಾಳಿಗೆ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೊಡ್ಡ ಪಂಜನಿ ವಲಯದ ಪೆನುಗೋಳಕಳ ಗ್ರಾಮದಲ್ಲಿ ನಡೆದಿದೆ. ಕಾಡಿಗೆ ಕಟ್ಟಿಗೆ ಸಂಗ್ರಹಿಸಲು ಹೋಗುತ್ತಿದ್ದ ಬಂಗಾರಪ್ಪ (45) ಎಂಬವರ ಮೇಲೆ ಆನೆ ದಾಳಿ ಮಾಡಿದೆ.

ಬಂಗಾರಪ್ಪ ಅವರನ್ನು ಪಲಮನೇರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಟ್ಟಿಗೆ ತರಲು ಹೋಗಿದ್ದ ವ್ಯಕ್ತಿ ಮೇಲೆ ಏಕಾಏಕಿ ಆನೆ ದಾಳಿ ಮಾಡಿದೆ, ಆ ಸಮಯದಲ್ಲಿ ತಪ್ಪಿಸಿಕೊಳ್ಳಲು ಹಾಗದೆ ಬಂಗಾರಪ್ಪ ತೀವ್ರ ಗಾಯಗೊಂಡಿದ್ದರು.

ರಕ್ತದ ಮಡುವಿನಲ್ಲಿ ಸಹಾಯಕ್ಕಾಗಿ ಕಿರುಚಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಆ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ಸ್ಥಳೀಯರು ಭಯಭೀತವಾಗಿದ್ದಾರೆ.

Follow Us on : Google News | Facebook | Twitter | YouTube