ಶೀಲ ಶಂಕಿಸಿ ಪತಿಯಿಂದ ಪತ್ನಿಯ ಕೊಲೆ, ಯಾದಗಿರಿಯಲ್ಲಿ ಘಟನೆ
ಶೀಲ ಶಂಕಿಸಿ ಪತಿಯೇ ತನ್ನ ಪತ್ನಿಯನ್ನು ಕೊಂದ ಅಮಾನವೀಯ ಘಟನೆ ಸೋಮವಾರ ಮಾಧ್ವಾರ ಗ್ರಾಮದಲ್ಲಿ ನಡೆದಿದೆ.
(Kannada News) : ಯಾದಗಿರಿ: ಪತಿಯೇ ತನ್ನ ಪತ್ನಿಯನ್ನು ಕೊಂದ ಅಮಾನವೀಯ ಘಟನೆ ಸೋಮವಾರ ಮಾಧ್ವಾರ ಗ್ರಾಮದಲ್ಲಿ ನಡೆದಿದೆ.
ರೇಣುಕಮ್ಮ (28) ಎಂಬ ಮಹಿಳೆಯ ಕೊಲೆಯಾದ ಮಹಿಳೆ. ಹೆಂಡತಿಯ ಮೇಲೆ ಸದಾ ಸಂಶಯ ತೋರುತ್ತಿದ್ದ ಪತಿಮಹಾಶಯ ಚೌಡಪ್ಪ ತಮ್ಮ ಜಮೀನಿನಲ್ಲಿ ಸೋಮವಾರ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ರೇಣುಕಮ್ಮ ಮತ್ತು ಚೌಡಪ್ಪ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಂತೋಷದಿಂದ ಇರಬೇಕಿದ್ದ ಕುಟುಂಬದಲ್ಲಿ ಹೆಂಡತಿಯ ಮೇಲಿನ ಅನುಮಾನವು ಕೊಲೆಯಲ್ಲಿ ಕೊನೆಗೊಂಡಿದೆ.
ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಿಪಿಐ ದೇವಿಂದ್ರಪ್ಪ ದೂಳಿಖೇಡ, ಪಿಎಸ್ಐ ಭೀಮರಾಯ ಬಂಕ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Title : Man kills wife in yadgir over Doubt