Man Molested old Woman, ಎಣ್ಣೆ ಏಟಲ್ಲಿ ಮುದುಕಿ ಮೇಲೆ ಅತ್ಯಾಚಾರ
Man Molested old Woman : ಕುಡಿದು, ಎಣ್ಣೆ ಏಟಲ್ಲಿ ಮುದುಕಿ ಮೇಲೆ ಅತ್ಯಾಚಾರ ಮಾಡಲು ಹೋಗಿ ತಗಲಾಕ್ಕೊಂಡ ಯುವಕ ಪೋಲೀಸರ ಅಥಿತಿಯಾಗಿದ್ದಾನೆ. ಫುಲ್ ನಶೆಯಲ್ಲಿದ್ದ ಯುವಕನಿಗೆ ಆ ವೃದ್ಧೆ ಮುದುಕಿ ಸೌಂದರ್ಯವತಿ ಕಂಡಂತೆ ಕಂಡಳೋ ಏನೋ?
ಸೇಲಂ, ತಮಿಳುನಾಡು (Kannada News): ಕುಡಿದು, ಎಣ್ಣೆ ಏಟಲ್ಲಿ ಮುದುಕಿ ಮೇಲೆ ಅತ್ಯಾಚಾರ ಮಾಡಲು (Man Molested old Woman) ಹೋಗಿ ತಗಲಾಕ್ಕೊಂಡ ಯುವಕ ಪೋಲೀಸರ ಅಥಿತಿಯಾಗಿದ್ದಾನೆ. ಫುಲ್ ನಶೆಯಲ್ಲಿದ್ದ ಯುವಕನಿಗೆ ಆ ವೃದ್ಧೆ ಮುದುಕಿ ಸೌಂದರ್ಯವತಿ ಕಂಡಂತೆ ಕಂಡಳೋ ಏನೋ? ಸರ್ಕಾರ ಹಾಗೂ ಪೊಲೀಸರು ಅದೆಷ್ಟೇ ಕಾನೂನು ತಂದರೂ ಈ ಕಾಮಿಗಳ ಸದೆ ಬಡಿಯಲು ಆಗುತ್ತಿಲ್ಲ.
ಕುಡಿತದ ಅಮಲಿನಲ್ಲಿ 70 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸೇಲಂ ಜಿಲ್ಲೆಯ ಕರುಮಂದುರೈ ಮೂಲದ ವೃದ್ಧೆಯೊಬ್ಬರು ಮೇಕೆ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶನಿವಾರ ಸಂಜೆ ಜಮೀನಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಅದೇ ಪ್ರದೇಶದ ಷಣ್ಮುಗಂ (25) ಎಂಬಾತ ಕುಡಿದ ಅಮಲಿನಲ್ಲಿ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಅಲ್ಲಿಗೆ ತಲುಪುತ್ತಿದ್ದಂತೆ ಷಣ್ಮುಗಂ ಪರಾರಿಯಾಗಿದ್ದಾನೆ.
ಕರುಮಂದೂರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಧನಲಕ್ಷ್ಮಿ ತಿಳಿಸಿದ್ದಾರೆ.