Welcome To Kannada News Today

Crime News: ತನ್ನ ಗೆಳತಿ ಮೇಲೆ ಕಣ್ಣಾಕಿದ ಸ್ನೇಹಿತನ ಕಥೆ ಖತಂ

Man murders friend: ತಾನು ಪ್ರೀತಿಸುತ್ತಿದ್ದು, ಮದುವೆ ಆಗಬೇಕೆಂದಿದ್ದ ಗೆಳತೀ ಮೇಲೆ ಸ್ನೇಹಿತ ಕಣ್ಣಾಕಿದ್ದ ಎಂಬ ವಿಷಯಕ್ಕೆ ಸ್ನೇಹಿತನ್ನು ಕೊಂದು ಕಾಲುವೆಗೆ ಎಸೆದಿದ್ದ ಘಟನೆ ಬೆಳಕಿಗೆ ಬಂದದ್ದು ಕೊಂದವನಿಂದಲೇ....

🌐 Kannada News :

Man murders friend: ಯುವಕನೊಬ್ಬ ತನ್ನ ಸ್ನೇಹಿತನ ಗೆಳತಿಯ ಮೇಲೆ ಕಣ್ಣಾಕಿದ್ದ, ಸ್ನೇಹಿತನಿಗೆ ಈ ವಿಷಯ ತಿಳಿದಾಗ ಅಲ್ಲಿ ಭರ್ಭರ ಕೊಲೆಯೊಂದು ನಡದೇ ಹೋಗಿತ್ತು.

ಆತ ಸ್ನೇಹಿತನನ್ನು ಕೊಂದು ಯಾರಿಗೂ ತಿಳಿಯದಂತೆ ಕಾಲುವೆಗೆ ಎಸೆದಿದ್ದ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ರಹಸ್ಯವನ್ನು ಪೊಲೀಸರು ಇತ್ತೀಚೆಗೆ ಭೇದಿಸಿದ್ದಾರೆ.

ಆರೋಪಿ ಸ್ನೇಹಿತ ಕುಡಿದು ನೆರೆಹೊರೆಯವರೊಂದಿಗೆ ಘರ್ಷಣೆ ನಡೆಸುವಾಗ ವಿಷಯ ಬೆಳಕಿಗೆ ಬಂದಿದೆ. ಸ್ನೇಹಿತನನ್ನು ಕೊಂದು ಆತನ ದೇಹವನ್ನು ಕಾಲುವೆಯಲ್ಲಿ ಬಿಸಾಡಿರುವುದಾಗಿ ಕುಡಿದ ಮತ್ತಿನಲ್ಲಿ ಆತನೇ ಬಾಯ್ಬಿಟ್ಟಿದ್ದ.

ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಮೇರೆಗೆ ಆರೋಪಿಯನ್ನು ಆತನ ಪತ್ನಿಯೊಂದಿಗೆ ಬಂಧಿಸಲಾಗಿದೆ ಎಂದು ಮೀರತ್ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ನಂತರ ನಸೀಮ್ ಶವ ಪತ್ತೆಯಾದರೂ, ಪೊಲೀಸರು ಮೃತ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ದೇಹವನ್ನು ಸುಡಲಾಗಿತ್ತು. ಕೆಲವು ದಿನಗಳ ನಂತರ ಆರೋಪಿ ಡ್ಯಾನಿಶ್ ಹೀನಾಳನ್ನು ವಿವಾಹವಾಗಿ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.