ಜೈಲಿನಲ್ಲಿಯೇ ಮಗಳ ಮೇಲೆ ತಂದೆ ಅತ್ಯಾಚಾರ

ರಾಜಸ್ಥಾನದ ತೆರೆದ ಜೈಲಿನಲ್ಲಿ ಈ ದುಷ್ಕೃತ್ಯ ನಡೆದಿದೆ. ಪೊಲೀಸರು ನೋಡ ನೋಡುತ್ತಿದ್ದಂತೆಯೇ.. ಆರೋಪಿಯೊಬ್ಬ ಮಗಳ ಮೇಲೆ ದೌರ್ಜನ್ಯ ನಡೆಸಿ ಪರಾರಿಯಾಗಿರುವ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. 

ರಾಜಸ್ಥಾನದ ತೆರೆದ ಜೈಲಿನಲ್ಲಿ ಈ ದುಷ್ಕೃತ್ಯ ನಡೆದಿದೆ. ಪೊಲೀಸರು ನೋಡ ನೋಡುತ್ತಿದ್ದಂತೆಯೇ.. ಆರೋಪಿಯೊಬ್ಬ ಮಗಳ ಮೇಲೆ ದೌರ್ಜನ್ಯ ನಡೆಸಿ ಪರಾರಿಯಾಗಿರುವ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಸಿರೋಹಿ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ನಂತರ ರಾಜಸ್ಥಾನದ ಕೈದಿಗಳ ಓಪನ್ ಏರ್ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಗಿದೆ.

ಕ್ಯಾಂಪಸ್ ನಿಯಮಗಳ ಪ್ರಕಾರ, ಆರೋಪಿ ತನ್ನ ಕುಟುಂಬದೊಂದಿಗೆ ಜೈಲಿನಲ್ಲಿ ಉಳಿಯಬಹುದು. ಆರೋಪಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಆದರೂ ಹುಟ್ಟಿನಿಂದ ಬಂದ ಬುದ್ದಿ ಬದಲಾಗುವುದಿಲ್ಲ ಅನ್ನಿಸುತ್ತದೆ…. ಜೈಲಿನಲ್ಲಿದ್ದರೂ ಬುದ್ಧಿ ಬದಲಾಗಿಲ್ಲ. ಪದೇಪದೇ ತನ್ನ ಹೆಂಡತಿಗೆ ಕಿರುಕುಳ ನೀಡಲು ಮತ್ತು ಮಗಳನ್ನು ಹಿಂಸಿಸಲು ಪ್ರಾರಂಭಿಸಿದ್ದನು.

ಪತಿಯ ಕಿರುಕುಳ ತಾಳಲಾರದ ಪತ್ನಿ.. ಮಗಳನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆ. ಇದರೊಂದಿಗೆ ಆತನ ಕಣ್ಣು ಮಗಳ ಮೇಲೆ ಬಿದ್ದಿದೆ. ಅದೊಂದು ಜೈಲು… ಆದರೂ ಸುತ್ತಲೂ ಪೊಲೀಸರಿದ್ದರೂ ಹೆದರದೆ ದುಷ್ಕೃತ್ಯಕ್ಕೆ ಮುಂದಾಗಿದ್ದ. ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ. ನಂತರ ಪೊಲೀಸರ ಕಣ್ಣು ತಪ್ಪಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಾಲಕಿ ತಾಯಿಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಮೇಲೆ ತೀವ್ರ ಕ್ರಮಕೈಗೊಳ್ಳುತ್ತಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today