ಚಾಮರಾಜನಗರ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತ ದಲಿತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಚಾಮರಾಜನಗರದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

( Kannada News Today ) : ಚಾಮರಾಜನಗರ : ಮಹಿಳೆಯರ ಮೇಲೆ, ಬಾಲಕಿಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ ಎಷ್ಟೇ ಕಠಿಣ ಕಾನೂನು ಬಂದರೂ ಕೃತ್ಯಗಳು ಮಾತ್ರ ಕಡಿಮೆಯಾಗುತ್ತಿಲ್ಲ, ಈ ನಡುವೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಪ್ರಾಪ್ತ ದಲಿತ ಬಾಲಕಿಯನ್ನ ಮದುವೆಯಾಗುತ್ತೇನೆಂದು ನಂಬಿಕೆ ಹುಟ್ಟಿಸಿ ಅತ್ಯಾಚಾರವೆಸಗಿದ್ದ ಚಾಮರಾಜನಗರ ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವ ಮಹತ್ವದ ತೀರ್ಪು ನೀಡಿದೆ.

ಚಾಮರಾಜನಗರಕ್ಕೆ ಸೇರಿದ ಗಾಳೀಪುರ ಬಡಾವಣೆಯ ಶಮೀವುಲ್ಲಾ ಎಂಬಾತನೇ ಆರೋಪಿ.

ಚಾಮರಾಜನಗರ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ - Kannada News

ಶಮೀವುಲ್ಲಾ, ಅಲಿಯಾಸ್ ಡಾಮ್ಟೆ, ಅಲಿಯಾಸ್ ಸಲ್ಮಾನ್, ಅಲಿಯಾಸ್ ಪ್ರೀತಂ ಎಂಬ ನಾನಾ ಹೆಸರಿನ ಆರೋಪಿಗೆ ಐಪಿಸಿ ಕಲಂ 366ರ ಅನ್ವಯ 5 ವರ್ಷ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ,  ಐಪಿಸಿ ಕಲಂ 376(ಎನ್) ಅನ್ವಯ 10 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ಹಾಗೂ ಪೋಕ್ಸೋ ಕಾಯ್ದೆ ಕಲಂ 4 ರ ಅನ್ವಯ 7 ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ.  ದಂಡ, ಪೋಕ್ಸೋ ಕಾಯ್ದೆ ಕಲಂ 6 ರ ಅನ್ವಯ 10 ವರ್ಷ  ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ಹಾಗೂ1 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್ ಪುರ ಅವರು ತೀರ್ಪು ನೀಡಿದ್ದಾರೆ.

ಇದನ್ನೂ ಓದಿ : ಪರ ಪುರುಷನೊಂದಿಗೆ ಓಡಿಹೋದ ವಿವಾಹಿತ ಮಹಿಳೆ, ಗ್ರಾಮಸ್ಥರು ಕೊಟ್ಟ ಶಿಕ್ಷೆ ಏನು

ಅತ್ಯಾಚಾರ ಆರೋಪಿ ಶಮೀವುಲ್ಲಾ ಮೂಲತಃ ಸ್ಟವ್ ಹಾಗೂ ಮಿಕ್ಸಿ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದು, ಚಾಮರಾಜನಗರ ತಾಲೂಕಿನ ಕೋಟಂಬಳ್ಳಿ ಗ್ರಾಮದ ದಲಿತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ಆಕೆಯನ್ನು ಪುಸಲಾಯಿಸಿ ಪ್ರೀತಿ, ಪ್ರೇಮ, ಮದುವೆ ಅಂತ ನಂಭಿಕೆ ಹುಟ್ಟಿಸಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ.

ಲಾಡ್ಜ್ ನಲ್ಲಿ ಇರಿಸಿ ಎರಡು ದಿನಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರ

ಅಲ್ಲದೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಲಾಡ್ಜ್ ನಲ್ಲಿ ಎರಡು ದಿನಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ. ಅದಾದ ಬಳಿಕೆ ಗ್ರಾಮಕ್ಕೆ ಬಂದ ಆ ಬಾಲಕಿ ನಡೆದ ವಿಷಯವನ್ನು ತಿಳಿಸಿದ್ದಳು.

ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿತ್ತು, ಅಂದಿನ ಡಿವೈಎಸ್ಪಿ, ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ  ಟಿ.ಹೆಚ್. ಲೋಲಾಕ್ಷಿ ಅವರು ವಾದ ಮಂಡಿಸಿದ್ದರು.

ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು

ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯು, ಅಪ್ರಾಪ್ತ ಬಾಲಕಿಯ ಮೇಲೆ ಎಸಗಿರುವ ಕೃತ್ಯ ಋಜುವಾತಾಗಿದೆಯೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಇತಿಹಾಸದಲ್ಲಿ  ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಿರುವುದು ಮೊದಲು ಎನ್ನಲಾಗಿದೆ.

Web Title : Man sentenced to life imprisonment for raping minor girl

Follow us On

FaceBook Google News

Read More News Today