Man Sold Wife: ಸ್ಮಾರ್ಟ್ ಫೋನ್ ಖರೀದಿಸಲು ಹೆಂಡತಿಯನ್ನೇ ಮಾರಿದ

Man Sold Wife: ಸ್ಮಾರ್ಟ್ ಫೋನ್ ಕೊಳ್ಳುವುದಾಗಿ ಕಟ್ಟಿಕೊಂಡಿದ್ದ ಪತ್ನಿಯನ್ನು ವ್ಯಕ್ತಿಯೊಬ್ಬ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ರಾಜ್ಯದ 17 ವರ್ಷದ ಹುಡುಗ ಕಳೆದ ಜುಲೈನಲ್ಲಿ ಮದುವೆಯಾಗಿದ್ದ.

ಭುವನೇಶ್ವರ್ (Man Sold Wife): ಸ್ಮಾರ್ಟ್ ಫೋನ್ ಕೊಳ್ಳುವುದಾಗಿ ಕಟ್ಟಿಕೊಂಡಿದ್ದ ಪತ್ನಿಯನ್ನು ವ್ಯಕ್ತಿಯೊಬ್ಬ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ರಾಜ್ಯದ 17 ವರ್ಷದ ಹುಡುಗ ಕಳೆದ ಜುಲೈನಲ್ಲಿ ಮದುವೆಯಾಗಿದ್ದ. ಅವನು ತನ್ನ ಹೆಂಡತಿಯೊಂದಿಗೆ ರಾಜಸ್ಥಾನಕ್ಕೆ ಕೆಲಸಕ್ಕಾಗಿ ಹೋಗಿದ್ದ ಮತ್ತು ಸ್ಮಾರ್ಟ್ಫೋನ್ ಖರೀದಿಸುವ ಆಶಯ ಹೊಂದಿದ್ದನು.

ಮದುವೆಯಾದ ಒಂದು ತಿಂಗಳ ನಂತರ ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಪತ್ನಿಯನ್ನು ಮಾರಾಟ ಮಾಡಿದ ಆರೋಪದ ಮೇಲೆ 17 ವರ್ಷದ ಯುವಕನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಹುಡುಗ ತನ್ನ ಹೆಂಡತಿಯೊಂದಿಗೆ ಇಟ್ಟಿಗೆ ಗೂಡು ಕೆಲಸ ಮಾಡಲು ರಾಜಸ್ಥಾನಕ್ಕೆ ಹೋಗಿದ್ದ. ಮಧ್ಯಪ್ರದೇಶದ ಗಡಿಭಾಗದಲ್ಲಿರುವ ರಾಜಸ್ಥಾನ ಜಿಲ್ಲೆಯ ಬಾರನ್‌ನಿಂದ 26 ವರ್ಷದ ಹೆಂಡತಿಯನ್ನು ಪೊಲೀಸರು ರಕ್ಷಿಸಿದ್ದಾರೆ

ಎಲ್ಲರಂತೆ ತನ್ನ ಬಳಿ ಕೂಡ ಮೊಬೈಲ್ ಇರಬೇಕು, ಜುಮ್ಮಂತ ಮೊಬೈಲ್ ಕೈಯಲ್ಲಿ ಹಿಡಿದು ಓಡಾಡಬೇಕು, ಅಂತ ಅಂದು ಕೊಂಡಿದ್ದ. ಆಸೆ ಇರೋದು ತಪ್ಪಲ್ಲ ಆದ್ರೆ ಆ ಆಸೆ ನೆರವೇರಿಸಿಕೊಳ್ಳಲು ಆ ವ್ಯಕ್ತಿ ಮಾಡಿದ ಮೂರ್ಖ ಕೆಲಸಕ್ಕೆ ನೀವು ಸಹ ಮುಖಕ್ಕೆ ಉಗಿತಿರಾ…

ಹೌದು, ಆತ ತನ್ನ ಪತ್ನಿಯನ್ನು 55 ವರ್ಷದ ವ್ಯಕ್ತಿಗೆ 1.8 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಮಾರಾಟ ಮಾಡಿ ಯಾವುದೇ ಪಶ್ಚಾತ್ತಾಪ ಇಲ್ಲದೆ ಆತ ಆ ಹಣದಿಂದ ಫೋನ್ ಖರೀದಿಸಿದ್ದ.

ಪೊಲೀಸರ ಪ್ರಕಾರ, ಬಾಲಕಿಯನ್ನು ರಕ್ಷಿಸಲು ತಂಡವು ಸಾಕಷ್ಟು ಪ್ರಯತ್ನಗಳನ್ನು ಮಾಡಿತು, ಏಕೆಂದರೆ ಸ್ಥಳೀಯ ಗ್ರಾಮಸ್ಥರು ಆಕೆಗಾಗಿ ಹಣವನ್ನು ನೀಡಿರುವುದಾಗಿ ಹೇಳಿ ಪೊಲೀಸ್ ತಂಡವನ್ನು ಕರೆದುಕೊಂಡು ಹೋಗಲು ನಿರಾಕರಿಸಿದರು.

ಕೊನೆಗೆ ಯುವತಿ ನಾಪತ್ತೆಯಾದ ನಂತರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಅವರದೇ ಭಾಷೆಯಲ್ಲಿ ಬಾಯಿ ಬಿಡಿಸಿದ್ದಾರೆ. ಅದೇನೋ ಹೇಳ್ತಾರಲ್ವ… ಆಡೋ ಮಕ್ಕಳಿಗೆ ಮದುವೆ ಮಾಡಿದ್ರೆ….