ಪರೀಕ್ಷೆಯಲ್ಲಿ ಹೈಟೆಕ್ ನಕಲು, ಅಭ್ಯರ್ಥಿಯ ಮಾಸ್ಕ್ ನಲ್ಲಿ ಸಿಮ್ ಕಾರ್ಡ್, ಮೈಕ್..

ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು ಹೈಟೆಕ್ ವಂಚನೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ

🌐 Kannada News :

ಮುಂಬೈ: ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು ಹೈಟೆಕ್ ವಂಚನೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಆತ ಧರಿಸಿದ್ದ ಮಾಸ್ಕ್ ಗೆ ಅಳವಡಿಸಿದ್ದ ಸಿಮ್ ಕಾರ್ಡ್ ಹಾಗೂ ಮೈಕ್ ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಪಿಂಪ್ರಿ-ಚಿಂಚ್‌ವಾಡ್ ವ್ಯಾಪ್ತಿಯ ಹಿಂಜೆವಾಡಿ ಪ್ರದೇಶದ ಬ್ಲೂ ರಿಡ್ಜ್ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ನಡೆಯಿತು.

ಪರೀಕ್ಷೆಗೆ ಹಾಜರಾದ ಒಬ್ಬ ಅಭ್ಯರ್ಥಿಯನ್ನು ಪೊಲೀಸ್ ಮುಖ್ಯಸ್ಥ ಶಶಿಕಾಂತ್ ದೇವಕಾಂತ್ ಅವರು ಪರಿಶೀಲಿಸಿದರು. ಆ ವೇಳೆ ಅವರು ಧರಿಸಿದ್ದ ಮಾಸ್ಕ್ ನಲ್ಲಿ ಎಲೆಕ್ಟ್ರಾನಿಕ್ ಸಾಧನ ಇರುವುದು ಪತ್ತೆಯಾಗಿದೆ.

ಮಾಸ್ಕ್‌ಗೆ ಜೆಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಏರ್‌ಟೆಲ್ ಸಿಮ್ ಕಾರ್ಡ್, ಸ್ವಿಚ್ ಜೊತೆಗೆ ಮೈಕ್ ಅಳವಡಿಸಿರುವುದನ್ನು ನೋಡಿ ಶಾಕ್ ಆದರು. ಅವೆಲ್ಲವೂ ಸಹ ತಂತಿಗಳೊಂದಿಗೆ ಸಂಪರ್ಕ ಕಲ್ಪಿಸಿ, ಬಹಳ ಚಾಕಚಕ್ಯತೆಯಿಂದ ಫಿಕ್ಸ್ ಮಾಡಲಾಗಿತ್ತು.

ಪೊಲೀಸರು ಮಾಸ್ಕ್ ಪರಿಶೀಲಿಸುತ್ತಿರುವಾಗ ಅಭ್ಯರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಜಾಲಾಡುತ್ತಿದ್ದಾರೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today