ವಿಕೃತಿ ಮೆರೆದ ಪತಿ : ಸ್ನೇಹಿತನ ಜತೆ ಸಹಕರಿಸುವಂತೆ ಕಿರುಕುಳ

Mental harassment from husband to wife, Complaint against husband - Hubballi News

ಕನ್ನಡ ನ್ಯೂಸ್ ಟುಡೇCrime News

ಹುಬ್ಬಳ್ಳಿ :  ಗಂಡ ಹೆಂಡತಿಯ ನಡುವೆ ಚಿಕ್ಕ ಪುಟ್ಟ ಜಗಳ ಸಾಮಾನ್ಯ, ಕೆಲವು ಮನೆಯಲ್ಲೇ ಬಗೆ ಆದರೆ ಕೆಲವೊಂದು ಹಿರಿಯರ ಸಮ್ಮುಖದಲ್ಲಿ ಇಲ್ಲವೇ ಪೊಲೀಸ್ ಠಾಣೆಯಲ್ಲಿ ರಾಜಿಯಾಗುತ್ತವೆ, ಆದರೆ ಈಗ ನಾವು ಹೇಳ ಹೊರಟಿರೋದು ಇವೆಲ್ಲದ್ದಕ್ಕೂ ಮೀರಿ ವರ್ತಿಸಿದ ವಿಕೃತಿ ಮೆರೆದ ಪತಿರಾಯನ ಕಹಾನಿ, ಮದುವೆಯಾದ ಎರಡೇ ದಿನಕ್ಕೆ ಪತಿ ತನ್ನ ನೀಚ ಮುಖವಾಡ ತೋರಿದ್ದಾನೆ. ತನ್ನ ಸ್ನೇಹಿತನೊಂದಿಗೆ ಮಲಗು, ಅವನಿಗೆ ಸಹಕರಿಸುವಂತೆ ಪತ್ನಿಗೆ ಪೀಡಿಸಿದ್ದಾನೆ. ಸಧ್ಯ ಈ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಣೇಶಪೇಟೆ ನಿವಾಸಿ ಮುಸ್ತಾಕ್ ಕಾಟೇವಾಡಿ ಎಂಬಾತನೇ ಆ ಮಹಾನ್ ಪತಿ, ಪತ್ನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪಿ. 2019 ಜುಲೈ ತಿಂಗಳಿನಲ್ಲಿ ಮುಸ್ತಾಕ್ ಜತೆ ಮದುವೆಯಾಗಿದೆ. ಎರಡು ದಿನ ಚೆನ್ನಾಗಿ ನೋಡಿಕೊಂಡ ಪತಿ  ಬಳಿಕ ತನ್ನ ಸ್ನೇಹಿತನ ಕರೆದುಕೊಂಡು ಬಂದು ಆತನೊಂದಿಗೂ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.

ವಿಕೃತಿ ಮೆರೆದ ಪತಿ : ಸ್ನೇಹಿತನ ಜತೆ ಸಹಕರಿಸುವಂತೆ ಕಿರುಕುಳ - Kannada News

ಆತನ ಮಾತಿಗೆ ಒಪ್ಪದೆ ಇದ್ದಾಗ ಮಹಿಳಾ ಸಂಘಟನೆಯಲ್ಲಿ ಮಾಡಿದ 5 ಲಕ್ಷ ರೂ. ಸಾಲ ನೀನೇ ತೀರಿಸು ಇಲ್ಲವೇ ಸ್ನೇಹಿತನ ಜತೆ ಸಹಕರಿಸುವಂತೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅದಲ್ಲದೆ ಮಾತು ಕೇಳದಿದ್ದರೆ ಬೆಡ್ ರೂಮ್ ನಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟು ಎಲ್ಲರಿಗೂ ವಿಡಿಯೋ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.////

Quick Links : Kannada Crime News | Karnataka Crime News


 

Follow us On

FaceBook Google News