ಕಾಣೆಯಾಗಿದ್ದ ಯುವತಿಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆ

ಉತ್ತರ ಪ್ರದೇಶದಲ್ಲಿ ಮತ್ತೊಂದು ಧಾರುಣ, ಯುವತಿಯ ಅನುಮಾನಾಸ್ಪದ ಸಾವು ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಶವ

ಕುತ್ತಿಗೆ ಭಾಗದಲ್ಲಿ ಆಗಿದ್ದ ಗಾಯದ ಗುರುತುಗಳು ಕಾಣಿಸಿಕೊಂಡ ನಂತರ ಯುವತಿಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯುವತಿಯ ನಾಪತ್ತೆಯ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಯುವತಿಯ ಪೋಷಕರು ಗ್ರಾಮದಲ್ಲಿ ಯಾರೊಂದಿಗೂ ದ್ವೇಷ ಹೊಂದಿಲ್ಲ ಎಂದು ಹೇಳಿದ್ದಾರೆ. ಭಾನುವಾರ ಕಾಣೆಯಾಗಿದ್ದ ಯುವತಿಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ನಂತರ ಕುಟುಂಬದವರ ರೋಧನೆ ಮುಗಿಲು ಮುಟ್ಟಿತ್ತು.

( Kannada News ) : ಲಖನೌ (ಉತ್ತರ ಪ್ರದೇಶ) : ಹತ್ರಾಸ್ ಘಟನೆ ಮಾಸುವ ಮುಂಚೆಯೇ ಉತ್ತರ ಪ್ರದೇಶ ರಾಜ್ಯದಲ್ಲಿ ಮತ್ತೊಂದು ಧಾರುಣ ಸಾವು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಪಸಗವಾನ್ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಣೆಯಾಗಿದ್ದ ಯುವತಿಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.

ಯುವತಿಯ ದೇಹವು ನೀರಿನಿಂದ ತುಂಬಿದ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದ್ದು, ಆಕೆಯ ಕುತ್ತಿಗೆಗೆ ಗಾಯದ ಗುರುತುಗಳಿವೆ. ಯುವತಿ ಶುಕ್ರವಾರ ನಾಪತ್ತೆಯಾಗಿದ್ದಳು ಎನ್ನಲಾಗಿದೆ.

ಕುತ್ತಿಗೆ ಭಾಗದಲ್ಲಿ ಆಗಿದ್ದ ಗಾಯದ ಗುರುತುಗಳು ಕಾಣಿಸಿಕೊಂಡ ನಂತರ ಯುವತಿಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯುವತಿಯ ನಾಪತ್ತೆಯ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಯುವತಿಯ ಪೋಷಕರು ಗ್ರಾಮದಲ್ಲಿ ಯಾರೊಂದಿಗೂ ದ್ವೇಷ ಹೊಂದಿಲ್ಲ ಎಂದು ಹೇಳಿದ್ದಾರೆ. ಭಾನುವಾರ ಕಾಣೆಯಾಗಿದ್ದ ಯುವತಿಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ನಂತರ ಕುಟುಂಬದವರ ರೋಧನೆ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ : ಮಗನ ಮುಂದೆಯೇ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಕಾಣೆಯಾಗಿದ್ದ ಯುವತಿಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರು ಮತ್ತು ಅಪರಾಧ ವಿಭಾಗದ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು. ಘಟನಾ ಸ್ಥಳವನ್ನು ಜಿಲ್ಲಾ ಎಸ್‌ಪಿ ವಿಜಯ್ ಧೂಲ್ ಪರಿಶೀಲಿಸಿದರು. ಯುವತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮರಣೋತ್ತರ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Scroll Down To More News Today