Crime News, ಮಾಡೆಲ್ ಅನ್ನು ಹೊಟೇಲ್‌ನಲ್ಲಿ ಕೂಡಿಹಾಕಿ 3 ದಿನಗಳ ಕಾಲ ಅತ್ಯಾಚಾರ

ಕೇರಳದಲ್ಲಿ ಮಾಡೆಲ್ ಒಬ್ಬರನ್ನು ಹೊಟೇಲ್‌ನಲ್ಲಿ ಕೂಡಿಹಾಕಿ 3 ದಿನಗಳ ಕಾಲ ಅತ್ಯಾಚಾರವೆಸಗಿದ ಘಟನೆ ಭಾರೀ ಸಂಚಲನ ಮೂಡಿಸಿದೆ.

  • ಕೇರಳದಲ್ಲಿ ಮಾಡೆಲ್ ಒಬ್ಬರನ್ನು ಹೊಟೇಲ್‌ನಲ್ಲಿ ಕೂಡಿಹಾಕಿ 3 ದಿನಗಳ ಕಾಲ ಅತ್ಯಾಚಾರವೆಸಗಿದ ಘಟನೆ ಭಾರೀ ಸಂಚಲನ ಮೂಡಿಸಿದೆ.

ಕೊಚ್ಚಿ : 27 ವರ್ಷದ ಮಾಡೆಲ್ ಕೇರಳದ ಮಲಪ್ಪುರಂ ಜಿಲ್ಲೆಯವರು. ಕಾರ್ಯಕ್ರಮದ ನೆಪ ಹೇಳಿ ಕೊಚ್ಚಿಯ ಸ್ಟಾರ್ ಹೋಟೆಲ್ ಗೆ ಬರುವಂತೆ ಮಾಡೆಲ್ ಗೆ ಆಹ್ವಾನ ನೀಡಿದ್ದಾರೆ. ಇದನ್ನು ನಂಬಿ ಮಾಡೆಲ್ ಕೂಡ ಕಳೆದ ತಿಂಗಳು 28ರಂದು ಕೊಚ್ಚಿ ಹೋಗಿದ್ದಳು. ನಂತರ ಸಲೀಂ ಕುಮಾರ್ ಸೇರಿದಂತೆ 3 ಮಂದಿ ಸೇರಿ ಆಕೆಯನ್ನು ಸ್ಟಾರ್ ಹೋಟೆಲ್ ಗೆ ಕರೆದೊಯ್ದಿದ್ದರು.

ಅಲ್ಲಿಗೆ ಬಂದ ಅವರು ಮಾಡೆಲ್ ಯುವತಿಗೆ ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯವನ್ನು ಕುಡಿಸಿದ್ದಾರೆ. ಇದನ್ನು ಕುಡಿದ ಮಾಡೆಲ್ ತಕ್ಷಣ ಪ್ರಜ್ಞೆ ತಪ್ಪಿದ್ದಾರೆ. ನಂತರ ಮೂವರು ಮಾಡೆಲ್‌ ಅನ್ನು ಹೊಟೇಲ್‌ ರೂಂನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾರೆ. ಮಾಡೆಲ್ ಸುಂದರಿಯ ಮೇಲೆ 3 ಜನ ಸತತ 3 ದಿನ ಅತ್ಯಾಚಾರ ಎಸಗಿದ್ದಾರೆ. ಹೊಟೇಲ್ ಮಾಲಕಿ ಕ್ರಿಸ್ಟಿನಾ ಕೂಡ ಈ ಕೃತ್ಯಕ್ಕೆ ಸಹಕರಿಸುವ ಮೂಲಕ ಭಾಗಿಯಾಗಿದ್ದರು ಎನ್ನಲಾಗಿದೆ.

ಇದೇ ವೇಳೆ ಮಾಡೆಲ್ ಹೋಟೆಲ್ ನಿಂದ ತಪ್ಪಿಸಿಕೊಂಡು ಬಂದು ದೌರ್ಜನ್ಯದ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನನ್ವಯ ಡಿಸೆಂಬರ್ 1 ಮತ್ತು 2 ರಂದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಲೀಂ ಕುಮಾರ್ ನನ್ನು ಬಂಧಿಸಿದ್ದಾರೆ. ಇದೇ ವೇಳೆ ಅಜ್ಮಲ್, ಸಮೀರ್ ಹಾಗೂ ಹೋಟೆಲ್ ಮಾಲಕಿ ಕ್ರಿಸ್ಟಿನಾ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಪತಿಯಿಂದ ದೂರವಾಗಿ ಬದುಕುತ್ತಿರುವ ಮಾಡೆಲ್ ಮಹಿಳೆಗೆ ಮಗುವಿದೆ….

Model locked in hotel and raped for 3 days

Stay updated with us for all News in Kannada at Facebook | Twitter
Scroll Down To More News Today