Welcome To Kannada News Today

Crime News: ಚಿಕನ್ ಗ್ರೇವಿ ತಿಂದು ತಾಯಿ ಮಗಳು ಸಾವು! ಆಗಿದ್ದೇನೆ ?

ಚಿಕನ್ ಗ್ರೇವಿ ಸೇವಿಸಿ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ತೂತುಕುಡಿ ಜಿಲ್ಲೆಯ ಕೋವಿಲಪಟ್ಟಿಯ ತಂಗಪ್ಪ ನಗರದ ಕರ್ಪಗಂ (30) ಬುಧವಾರ ಮನೆಯ ಸಮೀಪದ ಹೋಟೆಲ್ ನಲ್ಲಿ ಚಿಕನ್ ಗ್ರೇವಿ ತಂದಿದ್ದಾರೆ.

🌐 Kannada News :

ಚೆನ್ನೈ: ಚಿಕನ್ ಗ್ರೇವಿ ಸೇವಿಸಿ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ತೂತುಕುಡಿ ಜಿಲ್ಲೆಯ ಕೋವಿಲಪಟ್ಟಿಯ ತಂಗಪ್ಪ ನಗರದ ಕರ್ಪಗಂ (30) ಬುಧವಾರ ಮನೆಯ ಸಮೀಪದ ಹೋಟೆಲ್ ನಲ್ಲಿ ಚಿಕನ್ ಗ್ರೇವಿ ತಂದಿದ್ದಾರೆ. ಹೇಗೋ ಮನೆಯಲ್ಲೇ ಅನ್ನ ಇದೆ ಅದಕ್ಕೆ ಚಿಕನ್ ಗ್ರೇವಿ ತಂದು ತಿಂದರಾಯಿತು ಎನ್ನುವುದು ಅವರ ಪ್ಲಾನ್ ಆಗಿತ್ತು. ಚಿಕನ್ ಗ್ರೇವಿಯನ್ನು ಮಗಳು ದರ್ಶಿನಿ (4) ಜೊತೆಗೆ ತಾಯಿ ಸಹ ಸೇವಿಸಿದ್ದಾಳೆ.

ಊಟ ಮಾಡಿದ ಸ್ವಲ್ಪ ಹೊತ್ತಿಗೆ ಅಜೀರ್ಣ ಎನಿಸಿದೆ, ತಾಯಿ ಮತ್ತು ಮಗಳು ಇನ್ನೊಂದು ಅಂಗಡಿಗೆ ಹೋಗಿ ಕೂಲ್ ಡ್ರಿಂಕ್ ತಂದು ಕುಡಿದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸಮಸ್ಯೆ ಇನ್ನಷ್ಟು ಗಂಭೀರ ಆಗಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಾರಿಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಚಿಕನ್ ಗ್ರೇವಿ ಅಥವಾ ಸಾಫ್ಟ್ ಡ್ರಿಂಕ್ ಅವರ ಸಾವಿಗೆ ಕಾರಣವಿರಬಹುದು ಎಂದು ಮೃತನ ಸಂಬಂಧಿಕರು ದೂರು ನೀಡಿದ ನಂತರ ಕೋವಿಲಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅವರ ಮರಣದ ಕಾರಣವನ್ನು ಮರಣೋತ್ತರ ಪರೀಕ್ಷೆಯ ವರದಿ ಬರುವ ತನಕ ಇನ್ನೂ ನಿರ್ಧರಿಸಲಾಗುವುದಿಲ್ಲ.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today