ಉತ್ತರ ಪ್ರದೇಶ: ಮಲಗಿದ್ದಾಗ ಟೇಬಲ್ ಫ್ಯಾನ್ ಮೇಲೆ ಬಿದ್ದು ತಾಯಿ-ಮಗಳು ಸಾವು
ಮಲಗಿದ್ದ ವೇಳೆ ಟೇಬಲ್ ಫ್ಯಾನ್ ಮೇಲೆ ಬಿದ್ದು ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಮಹಾರಾಜಗಂಜ್ ಪ್ರದೇಶದಲ್ಲಿ ನಡೆದಿದೆ. ನಿಶಾ ಚೌಧರಿ (35) ಮತ್ತು ಅವರ ಮಗಳು ಕರಿಷ್ಮಾ (14) ಮಧ್ಯಾಹ್ನ ತಮ್ಮ ಮನೆಯಲ್ಲಿ ಮಲಗಿದ್ದರು.
ಉತ್ತರ ಪ್ರದೇಶ: ಮಲಗಿದ್ದಾಗ ಟೇಬಲ್ ಫ್ಯಾನ್ ಮೇಲೆ ಬಿದ್ದು ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಧಾರುಣ ಘಟನೆ ಮಹಾರಾಜ್ ಗಂಜ್ ಪ್ರದೇಶದಲ್ಲಿ ನಡೆದಿದೆ. ನಿಶಾ ಚೌಧರಿ (35) ಮತ್ತು ಅವರ ಮಗಳು ಕರಿಷ್ಮಾ (14) ಮಧ್ಯಾಹ್ನ ತಮ್ಮ ಮನೆಯಲ್ಲಿ ಮಲಗಿದ್ದರು. ಅಷ್ಟರಲ್ಲಾಗಲೇ ತಿರುಗುತ್ತಿದ್ದ ಫ್ಯಾನ್ ಆಕಸ್ಮಿಕವಾಗಿ ಬಿದ್ದಿತ್ತು.
ಏಕಾಏಕಿ ಬಿದ್ದಿದ್ದರಿಂದ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕರೆಂಟ್ ವಯರ್ ಸ್ಪರ್ಶಸಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮಹಾರಾಜಗಂಜ್ ಎಸ್ಪಿ ಕೌಸ್ತುಬ್ ತಿಳಿಸಿದ್ದಾರೆ.
ಮೃತರ ಕುಟುಂಬ ಬ್ರಿಜ್ಮಂಗಂಜ್ನ ಧನಿ ಗ್ರಾಮದಲ್ಲಿ ವಾಸವಿದ್ದು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Mother-Daughter Die Of Electric Shock In Up Maharajganj
Follow Us on : Google News | Facebook | Twitter | YouTube