ಐದು ವರ್ಷದ ಮಗುವಿಗೆ ಹಾಲಿನಲ್ಲಿ ವಿಷ ಕೊಟ್ಟು ಕೊಂದ ತಾಯಿ

mother feeds poison : ಹಾಲಿನೊಂದಿಗೆ ವಿಷ ಬೆರಿಸಿಕೊಟ್ಟ ತಾಯಿ, ತಾಯಿಯೇ ಮಗುವನ್ನು ಕೊಂದ ಧಾರುಣ ಘಟನೆ

ಸಾದಿಕ್ ಬಾಷಾ ನೀಡಿದ ದೂರಿನ ಬಗ್ಗೆ ವಿಲ್ಲುಪುರಂ ಪಶ್ಚಿಮ ಪೊಲೀಸರು ತನಿಖೆ ನಡೆಸಿದ್ದರು. ಮರಣೋತ್ತರ ವರದಿ ಗುರುವಾರ ಬಂದಿದ್ದು, ಮಗುವಿಗೆ ಹಾಲಿನಲ್ಲಿ ವಿಷ ಬೆರಿಸಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದ್ದು, ತಾಯಿ ಯಾಸ್ಮಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.

( Kannada News ) : ಟಿ.ನಗರ (ತಮಿಳುನಾಡು) : ಹಾಲಿನೊಂದಿಗೆ ವಿಷ ಬೆರಿಸಿಕೊಟ್ಟಿದ್ದ ಐದು ವರ್ಷದ ಬಾಲಕನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಲ್ಲುಪುರಂ ಪಾಪನಕುಲಂ ಪ್ರದೇಶದ ಅನ್ವರ್ ಬಾಷಾ ಅವರ ಮಗ ಸಾಧಿಕ್ ಬಾಷಾ (35) ಖಾಸಗಿ ಬಸ್ ಕಂಡಕ್ಟರ್. ಅವರ ಪತ್ನಿ ಯಾಸ್ಮಿನ್ (28).

ಇದನ್ನೂ ಓದಿ : ಮಹಿಳೆ ಮೇಲೆ ಚಿರತೆ ದಾಳಿ, ಸ್ಥಿತಿ ಗಂಭೀರ : ಕೊಪ್ಪಳದಲ್ಲಿ ಘಟನೆ

ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕರೋನಾ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದ ಕಾರಣ ಮತ್ತು ಮನೆಯಲ್ಲಿರುವ ಕಾರಣ ಸಾದಿಕ್‌ಬಾಶಾ ಆರ್ಥಿಕವಾಗಿ ಕಷ್ಟಪಡುತ್ತಿದ್ದಾರೆ. ಯಾಸ್ಮಿನ್ ಕಳೆದ ತಿಂಗಳು 28 ರಂದು ತನ್ನ ಐದು ವರ್ಷದ ಮಗುವಿಗೆ ಹಾಲಿನೊಂದಿಗೆ ವಿಷ ಬೆರಿಸಿಕೊಟ್ಟಿದ್ದಳು.

ಇದನ್ನೂ ಓದಿ : ಅರ್ಚಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ, ಭೂವಿವಾದಕ್ಕೆ ಅರ್ಚಕ ಬಲಿ

ಮರುದಿನ ಮಗು ಸತ್ತುಹೋಯಿತು. ಸಾದಿಕ್ ಬಾಷಾ ನೀಡಿದ ದೂರಿನ ಬಗ್ಗೆ ವಿಲ್ಲುಪುರಂ ಪಶ್ಚಿಮ ಪೊಲೀಸರು ತನಿಖೆ ನಡೆಸಿದ್ದರು. ಮರಣೋತ್ತರ ವರದಿ ಗುರುವಾರ ಬಂದಿದ್ದು, ಮಗುವಿಗೆ ಹಾಲಿನಲ್ಲಿ ವಿಷ ಬೆರಿಸಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದ್ದು, ತಾಯಿ ಯಾಸ್ಮಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.

Scroll Down To More News Today