ವೈರಲ್ ಸುದ್ದಿ: ಮಗನ ಕಚ್ಚಿದ ನಾಯಿಯ ಕೊಚ್ಚಿ ಕೊಂದ ತಂದೆ.. !

ನಾಯಿಯಿಂದ ಮಗ ಗಾಯಗೊಂಡಿದ್ದಕ್ಕೆ ಕೋಪಗೊಂಡು ನಾಯಿಯನ್ನು ಬರ್ಬರವಾಗಿ ಕೊಂದು ಹಾಕಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಸಿಮರಿಯಾಟಲ್ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಬುಧವಾರ ಬೆಳಕಿಗೆ ಬಂದಿದೆ.

ನಾಯಿಯಿಂದ ಮಗ ಗಾಯಗೊಂಡಿದ್ದಕ್ಕೆ ಕೋಪಗೊಂಡು ನಾಯಿಯನ್ನು ಬರ್ಬರವಾಗಿ ಕೊಂದು ಹಾಕಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಸಿಮರಿಯಾಟಲ್ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಬುಧವಾರ ಬೆಳಕಿಗೆ ಬಂದಿದೆ.

ಇದು ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸಾಗರ್ ವಿಶ್ವಾಸ್ ಎಂಬ ವ್ಯಕ್ತಿ ದೊಡ್ಡ ಕಬ್ಬಿಣದ ರಾಡ್ ನಿಂದ ನಾಯಿಯನ್ನು ಥಳಿಸಿದ್ದಾನೆ. ನಾಯಿ ನೋವಿನಿಂದ ನರಳುತ್ತಿದ್ದರೂ ನಿರ್ದಯಿ ವ್ಯಕ್ತಿ ನಾಯಿಯ ಕಾಲನ್ನು ಹರಿತವಾದ ಚಾಕುವಿನಿಂದ ಕತ್ತರಿಸಿದ್ದಾನೆ.

ವಿಡಿಯೋ ನೋಡಿದ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಕಾರ್ಯಕರ್ತರು ಸಾಗರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಾಯಿಯನ್ನು ಬರ್ಬರವಾಗಿ ಕೊಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 429 (ಹತ್ಯೆ, ವಿಷಪ್ರಾಶನ, ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ), ಪ್ರಾಣಿಗಳ ಕಾಯಿದೆ ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯದಲ್ಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today