Welcome To Kannada News Today

ಪಾರಿವಾಳ ವಿಚಾರ ಜಗಳ ಕೊಲೆಯಲ್ಲಿ ಅಂತ್ಯ, ಆನೇಕಲ್ ನಲ್ಲಿ ಘಟನೆ

Murder at Anekal Surya Nagar : ಪಾರಿವಾಳ ಕದ್ದಿದ್ದಾನೆ ಎಂಬ ವಿಚಾರಕ್ಕೆ ಶುರುವಾದ ದ್ವೇಷ ಅಂತಿಮವಾಗಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಆನೇಕಲ್​ನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

🌐 Kannada News :

( Kannada News ) : ಆನೇಕಲ್ ತಾಲ್ಲೂಕಿನ ಸೂರ್ಯ ಸಿಟಿ ಬಳಿಯ ಯಾರಂಡಳ್ಳಿ ಬಳಿ ಈ ಘಟನೆ ನಡೆದಿದ್ದು, ಪೀಟರ್ ಎಂಬಾತನೇ ತನ್ನ ಸ್ನೇಹಿತ ವಿಕಾಸ್ ನನ್ನ ಕೊಲೆ ಮಾಡಿದ್ದಾನೆ.

ವಿಕಾಸ್ ಮತ್ತು ಪೀಟರ್ ಇಬ್ಬರೂ ಸಹ ಒಂದೇ ಏರಿಯಾದವರು, ಹಾಗಾಗಿ ಸಾಮಾನ್ಯವಾಗಿ ಇಬ್ಬರಿಗೂ ಸ್ವಲ್ಪ ಹೆಚ್ಚೇ ಪರಿಚಯ ಇತ್ತು.‌  ಪೀಟರ್​ಗೆ ಪಾರಿವಾಳ ಸಾಕುವ ಹವ್ಯಾಸ, ಹಾಗಾಗಿ ಮನೆಯ ಬಳಿ ಹಲವಾರು ತರಾವರಿ ಪಾರಿವಾಳಗಳನ್ನು ಸಾಕಿದ್ದ.

ಈ ಪಾರಿವಾಳವೇ ಈ ಕೊಲೆ ಹಿಂದಿನ ವಿಲನ್, ಕೆಲ‌ ತಿಂಗಳ ಹಿಂದೆ ಪೀಟರ್ ಸಾಕಿದ್ದ ಪಾರಿವಾಳವನ್ನು ಈ ವಿಕಾಸ್ ಕದ್ದಿದ್ದ ಎನ್ನುವ ವಿಚಾರವೇ ಇವರಿಬ್ಬರಲ್ಲಿ ದ್ವೇಷ ಹುಟ್ಟಿಹಾಕಿತ್ತು.  ಹೀಗಾಗಿ ಅಲ್ಲಿಂದ ಇವರಿಬ್ಬರಿಗೆ ಎಣ್ಣೆ ಸೀಗೆಕಾಯಿ ಸಂಬಂಧ.

ಇದನ್ನೂ ಓದಿ : ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ : ಬಂಗಾರಪೇಟೆಯಲ್ಲಿ ಘಟನೆ

ಹೊಟ್ಟೆ ತುಂಬಾ ತಿನ್ನೋದು, ಅದು ಅರಾಗಲಿಲ್ಲ ಅಂತ ಹುಡುಗರ ಗುಂಪು ಕಟ್ಟಿಕೊಂಡು ಅಡ್ಡಾಡೋದು ವಿಕಾಸ್ ನ ದಿನ ನಿತ್ಯದ ಕಾಯಕ. ಈಗೆ ಅಡ್ಡಾದ ಬೇಕಾದ್ರೆ, ಯಾರಂಡಹಳ್ಳಿ ಬಳಿ ವಿಕಾಸ್ ಮತ್ತು ಪೀಟರ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ವಿಕಾಸ್‌ ಜೊತೆಗೆ ಕೆಲ‌ ಚೇಲಾಗಳು ಇದ್ರು ಎನ್ನಲಾಗಿದೆ.. ನಂತರ ಮಾತಿಗೆ ಮಾತು ಬೆಳೆದು, ನೀನಾ ನಾನಾ ಅಂತ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಈ ಮೊದಲೇ ವಿಕಾಸ್ ತನ್ನ ಬಳಿಯಿದ್ದ ಇರಿಸಿದ್ದ ಚಾಕು ತೆಗೆದು ಹೌಹಾರಿದ್ದಾನೆ, ದುರಾದೃಷ್ಟ ಏನಪ್ಪಾ ಅಂದ್ರೆ ವಿಕಾಸ್ ಕೈನಲ್ಲಿದ್ದ ಚಾಕುವನ್ನು ಪೀಟರ್ ಕಸಿದುಕೊಂಡು ವಿಕಾಸ್  ಗಂಟಲಿಗೆ, ಹೊಟ್ಟೆ, ಎದೆ ಭಾಗಕ್ಕೆ ಎದ್ವಾತದ್ವ ಚುಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ, ಬಾರಿ ರಕ್ತಸ್ರಾವದಿಂದ ಸ್ಥಳದಲ್ಲೇ ವಿಕಾಸ್ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೂರ್ಯ ನಗರ ಪೊಲೀಸರು ‌ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪೀಟರ್​ ನನ್ನು ಬಂಧಿಸಿದ್ದಾರೆ. ಪಾರಿವಾಳ ವಿಚಾರದಲ್ಲಿ ಶುರುವಾದ ಜಗಳಕ್ಕೆ ಹಾರಿ ಹೋದ ಸ್ನೇಹಿತನ ಪ್ರಾಣ ಪಕ್ಷಿ ಕಥೆ ಈ ರೀತಿ ಅಂತ್ಯಗೊಂಡಿದೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile