Welcome To Kannada News Today

ಲಾಕ್ ಡೌನ್ ಎಫೆಕ್ಟ್ : ಬೆಳೆ ಕೊಯ್ಲು ಮಾಡಲು ಜನರಿಲ್ಲದೆ, ನೊಂದ ರೈತ ಆತ್ಮಹತ್ಯೆ

No laborers to harvest crop, farmer kills self

🌐 Kannada News :

ಮಹಾಮಾರಿ ಕೊರೋನಾ ಕೇವಲ ಸೋಕಿತರಿಗೆ ಮಾತ್ರ ಬಾಧಿಸದೆ, ಎಲ್ಲಾ ವರ್ಗಕ್ಕೂ ಹೆಮ್ಮಾರಿಯಾಗಿದೆ, ಇದೆ ಕೊರೋನಾ ಎಫೆಕ್ಟ್ ಹೆಚ್ಚಾಗಿ ರೈತರಿಗೆ ಮುಳುವಾಗಿದೆ. ರೈತನು ತನ್ನ ಗೋಧಿ ಬೆಳೆ ಕೊಯ್ಲು ಮಾಡಲು ಕಾರ್ಮಿಕರ ಲಭ್ಯತೆಯ ಕಾರಣ ತನ್ನ ಜೀವನವನ್ನೇ ಕೊನೆಗೊಳಿಸಿಕೊಂಡಿರುವುದು ವರದಿಯಾಗಿದೆ.

ಪಾಟ್ನಾ: ಕರೋನವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ವಿಧಿಸಲಾದ ಲಾಕ್‌ಡೌನ್ ಕಾರಣದಿಂದಾಗಿ ರೈತರು ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ. ತಾವು ಬೆಳೆದ ತರಕಾರಿಗಳು ಹಣ್ಣುಗಳನ್ನು ಬೀದಿಗೆ ಸುರಿದು ಅಸಹಾಯಕತೆಯಿಂದ ದಿಕ್ಕುತೋಚದಂತಾಗಿದ್ದಾರೆ.

ಇಲ್ಲೊಬ್ಬ ರೈತ ತಮ್ಮ ಗೋಧಿ ಬೆಳೆ ಕೊಯ್ಲು ಮಾಡಲು ಕಾರ್ಮಿಕರ ಲಭ್ಯತೆಯ ಕಾರಣ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜಾರಿ ಗ್ರಾಮದ ಹೊರವಲಯದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು 52 ವರ್ಷದ ರಂಭವನ್ ಶುಕ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಭಾರತ್ ಕುಮಾರ್ ಪಾಲ್ ತಿಳಿಸಿದ್ದಾರೆ. ಮೃತರ ಕುಟುಂಬದ ಪ್ರಕಾರ, ಕಳೆದ ಕೆಲವು ದಿನಗಳಿಂದ ಶುಕ್ಲಾ ಬೆಲೆ ಕುಯ್ಲು ಮಾಡಲುಜನರನ್ನು ಹುಡುಕುತ್ತಿದ್ದನು, ಆದರೆ ಲಾಕ್ ಡೌನ್ ಕಾರಣ ಅವನಿಗೆ ಯಾರು ಸಿಗಲಿಲ್ಲ, ಎನ್ನಲಾಗಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.