Crime News: ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಆಕಿದ ಐಟಿ ಅಧಿಕಾರಿಗಳು! ಆನಂತರ ಕತೆಯಲ್ಲಿ ಟ್ವಿಸ್ಟ್

ಆತನೊಬ್ಬ ರಿಕ್ಷಾ ಚಾಲಕ. ಆಟೋ ಓಡಿಸಿ ತುಂಬಿಕೊಳ್ಳಬೇಕಿತ್ತು, ಅಂತಹ ವ್ಯಕ್ತಿಗೆ 3 ಕೋಟಿ ರೂಪಾಯಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ (ಐಟಿ) ನೋಟಿಸ್ ಜಾರಿ ಮಾಡಿದೆ.

ಲಕ್ನೋ: ಆತನೊಬ್ಬ ರಿಕ್ಷಾ ಚಾಲಕ. ಆಟೋ ಓಡಿಸಿ ತುಂಬಿಕೊಳ್ಳಬೇಕಿತ್ತು, ಅಂತಹ ವ್ಯಕ್ತಿಗೆ 3 ಕೋಟಿ ರೂಪಾಯಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ (ಐಟಿ) ನೋಟಿಸ್ ಜಾರಿ ಮಾಡಿದೆ.

ದಿನವೂ ದುಡಿದರೆ ಮುನ್ನೂರು ರೂಪಾಯಿ ಸಿಗೋದೇ ಡೌಟು, ಅಂತಹುದರಲ್ಲಿ ಮೂರೂ ಕೋಟಿ ಎಲ್ಲಿಂದ ತಂದಾನು. ಇಷ್ಟಕ್ಕೂ ಆತನಿಗೆ ಆ ತೆರಿಗೆ ಯಾಕೆ ?ಭಯಗೊಂಡ ಆತ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಆತ ಪಾನ್ ಕಾರ್ಡ್ ಅನ್ನು ಖಾತೆಗೆ ಲಿಂಕ್ ಮಾಡುವಂತೆ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರಿಂದ ಬಕಲ್ ಪುರದ ಜನ್ ಸುವಿಧಾ ಕೇಂದ್ರದಲ್ಲಿ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಕೆಲವು ದಿನಗಳ ನಂತರ, ಅಂಗಡಿಯಲ್ಲಿದ್ದ ವ್ಯಕ್ತಿಯೊಬ್ಬರು ಆತನ ಪಾನ್ ಕಾರ್ಡ್‌ನ ಬಣ್ಣದ ಪ್ರತಿಯನ್ನು ನೀಡಿದರು. ಆದರೆ, ಅಕ್ಟೋಬರ್ 19ರಂದು ಐಟಿ ಅಧಿಕಾರಿಗಳಿಂದ ದೂರವಾಣಿ ಕರೆ ಬಂದಿದೆ. 3,47,54,896 ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಇದರಿಂದ ಆಘಾತಕ್ಕೊಳಗಾದ ವ್ಯಕ್ತಿ ತಾನು ರಿಕ್ಷಾ ಚಾಲಕ ಎಂದು ಐಟಿ ಅಧಿಕಾರಿಗಳಿಗೆ ವಿವರಿಸಿದ್ದಾನೆ.

ಇದರೊಂದಿಗೆ 2018-19ನೇ ಸಾಲಿನಲ್ಲಿ 43,44,36,201 ರೂ.ಗಳ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಆತನ ಹೆಸರಿನಲ್ಲಿ ಯಾರೋ ವ್ಯವಹಾರ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದಾಗ ಅಸಲಿ ಕಥೆ ಅರ್ಥವಾಯಿತು.

ನಂತರ ತಾನು ಅನಕ್ಷರಸ್ಥನಾಗಿದ್ದರಿಂದ ಮೂಲ ಪ್ಯಾನ್ ಕಾರ್ಡ್‌ಗೂ ಕಲರ್ ಕಾಪಿಗೂ ವ್ಯತ್ಯಾಸ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಹಿಂದಿನ ವಂಚನೆಯನ್ನು ಅಧಿಕಾರಿಗಳಿಗೆ ವಿವರಿಸಿದರು.

ಈ ವಿಷಯ ತಿಳಿದ ಐಟಿ ಅಧಿಕಾರಿಗಳು ಪಾನ್ ಕಾರ್ಡ್ ಅನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದರು. ಪ್ರತಾಪ್ ಸಿಂಹ ಮಥುರಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today