ಅಂಧ ದಂಪತಿಗಳ ಮಗು ಕದ್ದೊಯ್ದ ನರ್ಸ್, ಆಮೇಲೆ ಆಗಿದ್ದೆ ಇಂಟ್ರೆಸ್ಟಿಂಗ್

Nurse Kidnapped Child From Blind Parents in Bangalore

ಅಂಧ ದಂಪತಿಗಳ ಮಗು ಕದ್ದೊಯ್ದ ನರ್ಸ್, ಆಮೇಲೆ ಆಗಿದ್ದೆ ಇಂಟ್ರೆಸ್ಟಿಂಗ್

Bangalore – ಸಂಗೀತ ಕಾರ್ಯಕ್ರಮಕ್ಕೆ ರಾಯಚೂರಿನ ದೇವದುರ್ಗದಿಂದ ಮೆಜೆಸ್ಟಿಕ್ ಗೆ ಬಂದು ಮೈಸೂರು ರಸ್ತೆ ತಲುಪಲು ಬಸ್ ಗೆ ಕಾಯುತ್ತಿದ್ದ ಅಂಧ ದಂಪತಿ ಬಸವರಾಜು ಮತ್ತು ಚಿನ್ನು ರವರ ಎಂಟು ತಿಂಗಳ ಮಗುವನ್ನು ಕೆಂಗೇರಿ ನಿವಾಸಿ ವೃತ್ತಿಯಲ್ಲಿ ನರ್ಸ್ ಆಗಿದ್ದ ಪಾರ್ವತಮ್ಮ ಕದ್ದೊಯ್ದಿದ್ದಳು.

ಆಗಿದ್ದೇನು : ಬಸ್ ಗಾಗಿ ಕಾಯುತ್ತಿದ್ದ ಅಂಧ ದಂಪತಿಗಳ ಮಗು ಅಳಲು ಪ್ರಾರಂಭಿಸಿದೆ, ಅದೇ ಸಮಯಕ್ಕೆ ಕೆಲಸದ ಮೇಲೆ ಚಿತ್ರದುರ್ಗಕ್ಕೆ ಹೋಗಿ ವಾಪಸ್ ಮೆಜೆಸ್ಟಿಕ್ ಬಂದು ಇಳಿದಿದ್ದ ಪಾರ್ವತಮ್ಮ ಮಗುವನ್ನು ಸಮಾಧಾನ ಪಡಿಸುವ ನೆಪಹೇಳಿ ಮಗು ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಳು.

>>>> Read Crime News in Kannada & Karnataka Crime News

ಅಂಧ ದಂಪತಿಗಳ ಮಗು ಕದ್ದೊಯ್ದ ನರ್ಸ್, ಆಮೇಲೆ ಆಗಿದ್ದೆ ಇಂಟ್ರೆಸ್ಟಿಂಗ್ - Kannada News

ಮಗುವನ್ನು ತಾನು ವಾಸಿಸುತ್ತಿದ್ದ ಕೆಂಗೇರಿಗೆ ತಂದು ತಾಯಿ ಚನ್ನಬಸವಮ್ಮ ಮತ್ತು ಅಕ್ಕ ಲಕ್ಷ್ಮಿ ದೇವಿಗೆ ತೋರಿಸಿದ್ದಳು, ಆ ನಂತರ ಸ್ವಲ್ಪ ಕೆಲಸ ಇದೆ ಮತ್ತೆ ಬರುತ್ತೇನೆಂದವಳು ಮಗುವನ್ನು  ಅವರ ಬಳಿಯೇ ಬಿಟ್ಟು ಹೋಗಿದ್ದಳು. ಇತ್ತ ಮಗುವಿನ ಹೆತ್ತ ಅಂಧ ದಂಪತಿಗಳು ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ, ಪಾರ್ವತಮ್ಮಳ ತಾಯಿ ಹಾಗೂ ಸಹೋದರಿ ಮಗುವನ್ನು ವಾಪಸ್ ಕೊಡಲು ಸಲಹೆ ನೀಡಿದ್ದಾರೆ. ಸಧ್ಯ ಖುದ್ದು ಅವರೇ ಬಂದು ಮಗುವನ್ನು ಪೊಲೀಸರಿಗೆ ಒಪ್ಪಿಸಿದ್ದು, ಪಾರ್ವತಮ್ಮಗೆ ಮಕ್ಕಳಿಲ್ಲದ ಕಾರಣ ಮಾನಸಿಕ ಖಿನ್ನತೆಯಿಂದ ಈ ರೀತಿ ಮಾಡಿದ್ದಾಳೆ ಹಾಗೂ ಅಂಧ ದಂಪತಿಗಳ ಈ ಮಗುವನ್ನು ಕದ್ದರೆ ಯಾರಿಗೂ ತಿಳಿಯುವುದಿಲ್ಲ ಎಂದು ಕೊಂಡಿದ್ದಳಂತೆ.

ಸಧ್ಯ ಮಗು ಹೆತ್ತವರ ಕೈ ಸೇರಿದ್ದು, ಪೊಲೀಸರು ಪಾರ್ವತಮ್ಮಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಆಕೆ ಬೇಲ್ ಮೂಲಕ ಹೊರ ಬಂದಿದ್ದಾಳೆ./////

Web Title : Nurse Kidnapped Child From Blind Parents in Bangalore
(Kannada News Live @ kannadanews.today

Follow us On

FaceBook Google News

Read More News Today