ಭೂತ ಬಿಡಿಸುವ ನೆಪದಲ್ಲಿ ಪದೇ ಪದೇ ಅತ್ಯಾಚಾರ

ಭೂತ ಬಿಡಿಸುವ ನೆಪದಲ್ಲಿ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ನಕಲಿ ಮಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ಭೂತ ಬಿಡಿಸುವ ನೆಪದಲ್ಲಿ ಪದೇ ಪದೇ ಅತ್ಯಾಚಾರ

( Kannada News Today ) : ಚೆನ್ನೈ:ರಾಸಿಪುರಂ ಬಳಿ ಭೂತ ಬಿಡಿಸುವ ನೆಪದಲ್ಲಿ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ನಕಲಿ ಮಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ವಿವರಕ್ಕೆ ಹೋಗೋದಾದ್ರೆ …. ಸೇಲಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ರೈತರ ತೋಟದಲ್ಲಿ ಕೆಲಸ ಮಾಡಿ ಅಲ್ಲಿ ವಾಸಿಸುತ್ತಿದ್ದಾರೆ. ಆತನಿಗೆ ಪತ್ನಿ, ಮತ್ತು 15 ಹಾಗೂ 13 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚುತ್ತಿದ್ದಂತೆ, ಆ ಬಾಲಕಿಯರು ಮನೆಯಲ್ಲಿಯೇ ಇರುತ್ತಿದ್ದರು. ಸ್ವಲ್ಪ ದಿನದ ನಂತರ ಯಾರೊಂದಿಗೂ ಮಾತನಾಡದೆ ವಿಚಿತ್ರವಾಗಿ ವರ್ತಿಸುತ್ತಿದ್ದರಿಂದ ಪೋಷಕರು ಕಳೆದ ತಿಂಗಳು ನಾಮಕ್ಕಲ್ ಜಿಲ್ಲೆಯ ಶೇಖರ್ (50) ಎಂಬ ಮಾಟಗಾರನ ಬಳಿ ಕರೆದುಕೊಂಡು ಹೋಗಿದ್ದಾರೆ.

ಆ ನಕಲಿ ಮಾಟಗಾರ, “ಬಾಲಕಿಯರ ಮೈಮೇಲೆ ಭೂತವಿದೆ, ಪ್ರತಿ ಶುಕ್ರವಾರ ವಿಶೇಷ ಪೂಜೆಗಳನ್ನು ಮಾಡಿದ ನಂತರ ಭೂತವು ಹೊರಟು ಹೋಗುತ್ತದೆ, ಹುಡುಗಿಯರನ್ನು ಇಲ್ಲಿಯೇ ಬಿಟ್ಟು ಹೋಗ್ಬೇಕು ಅಂತ ನಕಲಿ ಮಾಟಗಾರ ಹುಡುಗಿಯರ ತಂದೆ ತಾಯಿ ತಲೆಗೆ ಹುಳ ಬಿಟ್ಟಿದ್ದಾನೆ.

ಅವನ ಮಾತನ್ನು ನಂಬಿದ ಹೆತ್ತವರು ಬಾಲಕಿಯರನ್ನು ಶೇಖರ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.

ಇದೆ ಸಮಯಕ್ಕೆ ಹೊಂಚು ಹಾಕಿದ್ದ ನಕಲಿ ಕಾಮುಕ ಮಂತ್ರವಾದಿ ಆ ಯುವತಿಯರ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.

ಆ ಹೆಣ್ಣು ಮಕ್ಕಳು ಭಯದಿಂದ ಏನು ನಡೆಯುತ್ತಿದೆ ಎಂದು ಪೋಷಕರಿಗೆ ಹೇಳಲೂ ಆಗದೆ ಹಾಗೆ ಇರಲೂ ಆಗದೆ ನೋವನುಭವಿಸಿದ್ದಾರೆ.

ಆದರೆ, ಮಂತ್ರವಾದಿಯ ಕಿರುಕುಳ ಹೆಚ್ಚಾಗಿದ್ದರಿಂದ, ಏನಾಯಿತು ಎಂದು ಅವರು ಪೋಷಕರಿಗೆ ವಿವರಿಸಿದರು.

ತಕ್ಷಣ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಪೊಲೀಸರು ನಡೆಸಿದ ತನಿಖೆಯಲ್ಲಿ ಶೇಖರ್ ನಕಲಿ ಮಂತ್ರವಾದಿ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ಶೇಖರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೂ ಹೋದ ಮಾನ ಬರುತ್ತದೆಯೇ ?

ಇನ್ನಾದರೂ ಇಂತಹ ನಕಲಿ ಮಾಟಗಾರರ, ಮಂತ್ರವಾದಿಗಳ ನಂಬದೆ ಇದ್ದರೆ ಅಷ್ಟು ಸಾಕು……

Scroll Down To More News Today