Welcome To Kannada News Today

ಕಿತ್ತೂರು ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

೧.೨೫ ಕೆಜಿ ಯಷ್ಟು ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯ ಬಂಧನ

🌐 Kannada News :

ಚನ್ನಮ್ಮನ ಕಿತ್ತೂರು :  ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ವಿಜಯ ಕಲ್ಲಯ್ಯ ಕರೈಯ್ಯನವರ ಎಂಬುವವರ ಕಬ್ಬಿನ ಬೆಳೆಯಲ್ಲಿ ಯಾರಿಗೂ ಗೊತ್ತು ಆಗದಂತೆ ಅಕ್ರಮವಾಗಿ ಗಾಂಜಾ ಬೆಳೆಯಲಾಗಿತ್ತು ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ೧.೨೫ ಕೆಜಿ ಯಷ್ಟು ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಕಿತ್ತೂರು ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್‌ಐ ಎಸ್ ಬಿ ಮಾವಿನಕಟ್ಟಿ ಮತ್ತು ಸಿಬ್ಬಂದಿಗಳಾದ ಎಸ್.ಎಮ್. ಜವಳಿ, ಎಚ್.ಎಲ್.ಭಜಂತ್ರಿ, ಈಶ್ವರ ಜಿನ್ನವ್ವಗೋಳ, ಈರಪ್ಪ ಕಜಗನಟ್ಟಿ, ಲಗಮಪ್ಪ ಜಂಬಲವಾಡಿ, ಎಮ್.ಎಮ್. ದ್ಯಾಮನಗೌಡ, ರಮೇಶ ಶೇಲಿ, ರಮೇಶ ಗೇಜೆರಿ, ಬಾಸ್ಕರ್ ಪತ್ತಾರ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ನೀಲಕಂಠ ಚನ್ನಂಗಿ. ಕಂದಾಯ ಇಲಾಖೆ ನೀರಿಕ್ಷಕ ವ್ಹಿ.ಬಿ ಬಡಾಗಾವಿ, ಪಿಡಬ್ಲೂಡಿ ಸಹಾಯಕ ಅಭಿಯಂತರ ಎಸ್.ಆರ್ ಮಿರಜಕರ ನೇತೃತ್ವದ ತಂಡ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile