Police Chase Viral Video, ಸಿನಿಮೀಯ ರೀತಿ ಪೊಲೀಸ್ ರಿಯಲ್ ಚೇಸಿಂಗ್.. ವೈರಲ್ ವಿಡಿಯೋ!

Police Chase Viral Video, ಪೊಲೀಸರು ಕಳ್ಳರನ್ನು ಚೇಸ್ ಮಾಡಿ ಹಿಡಿಯುವುದನ್ನು ಸಿನಿಮಾಗಳಲ್ಲಿ ನೋಡುತ್ತಲೇ ಇರುತ್ತೇವೆ.. ಇಂತಹ ಸಂಗತಿಗಳು ನಿಜ ಜೀವನದಲ್ಲಿ ಕಾಣುವುದಿಲ್ಲ.. ಆದರೆ, ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Police Chase Viral Video, ಪೊಲೀಸರು ಕಳ್ಳರನ್ನು ಚೇಸ್ ಮಾಡಿ ಹಿಡಿಯುವುದನ್ನು ಸಿನಿಮಾಗಳಲ್ಲಿ ನೋಡುತ್ತಲೇ ಇರುತ್ತೇವೆ.. ಇಂತಹ ಸಂಗತಿಗಳು ನಿಜ ಜೀವನದಲ್ಲಿ ಕಾಣುವುದಿಲ್ಲ.. ಆದರೆ, ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿ ಕಳ್ಳನನ್ನು ಹಿಂಬಾಲಿಸಿ ಧೈರ್ಯದಿಂದ ಒಬ್ಬರೆ ಹಿಡಿಯುವ ದೃಶ್ಯ ಇದೀಗ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.

ಕರ್ನಾಟಕದ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಫೋನ್ ಕಸಿದು ಪರಾರಿಯಾಗುತ್ತಿದ್ದ ವೇಳೆ ಆತ ಕಳ್ಳ ಕಳ್ಳ ಎಂದು ಜೋರಾಗಿ ಕೂಗಿಕೊಂಡಿದ್ದಾನೆ. ಆತನ ಕಿರುಚಾಟವನ್ನು ಕೇಳಿದ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವರುಣ್, ಕಳ್ಳನನ್ನು ಹಿಂಬಾಲಿಸಿ, ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿ ಕಳ್ಳನನ್ನು ಹಿಡಿದಾಗ, ಯಾರೋ ಆದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರೂ ಪೊಲೀಸ್ ಅಧಿಕಾರಿಯನ್ನು ಶ್ಲಾಘಿಸಿದರು. ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಪೊಲೀಸ್ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಕೂಡ ಕಳ್ಳನನ್ನು ಹಿಡಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅವರನ್ನು ಶ್ಲಾಘಿಸಿದ್ದಾರೆ. ಆರೋಪಿಯನ್ನು ಬಂಧಿಸಿ ರಿಮಾಂಡ್ ಮಾಡಲಾಗಿದೆ.

Stay updated with us for all News in Kannada at Facebook | Twitter
Scroll Down To More News Today