Welcome To Kannada News Today

ಲಾಕ್ ಡೌನ್ ನಡುವೆಯೂ ಮಧ್ಯ ಮಾರಾಟ, ಸಿನಿಮೀಯ ರೀತಿಯಲ್ಲಿ ಪೊಲೀಸ್ ಕಾರ್ಯಾಚರಣೆ

police have arrested a security guard for selling liquor bottles at Yelahanka in Bengaluru

🌐 Kannada News :

ಬೆಂಗಳೂರಿನ ಯಲಹಂಕ ಬಳಿಯ ಬಾರ್ ಮತ್ತು ರೆಸ್ಟೋರೆಂಟ್‌ನಿಂದ ಮದ್ಯದ ಬಾಟಲಿಗಳನ್ನು ಕದ್ದು ಮಾರಾಟ ಮಾಡಿದ್ದಕ್ಕಾಗಿ ಪೊಲೀಸರು ಬಾರ್ ನ ಸೆಕ್ಯೂರಿಟಿ ಗಾರ್ಡ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಾಗಮಂಗಲ ಮೂಲದ ಕೃಷ್ಣ (36) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಆರೋಪಿ ಕೃಷ್ಣ ಬಾರ್‌ನ ಮೇಲಿರುವ ಕೊಠಡಿಯಲ್ಲಯೇ ವಾಸವಿದ್ದಾನೆ, ಆ ಮೂಲಕ ವಿವಿಧ ಬ್ರಾಂಡ್‌ಗಳ ಆಲ್ಕೋಹಾಲ್ ಬಾಟಲಿಗಳನ್ನು ಕದ್ದು ತನ್ನ ಸಂಪರ್ಕದಲ್ಲಿರುವ ಜನರಿಗೆ ಮಾರಾಟ ಮಾಡುತ್ತಿದ್ದ.

ರಾತ್ರಿಯ ಸಮಯದಲ್ಲಿ ಬಾರ್ ಸುತ್ತಲೂ ಸಾರ್ವಜನಿಕರ ಚಲನೆಯನ್ನು ಗಮನಿಸಿದ ಪೊಲೀಸರು ಅನುಮಾನಗೊಂಡರು. ಸಕ್ಕರೆಗೆ ಇರುವೆ ಮುಟ್ಟುವ ಹಾಗೆ, ಬಾರ್ ಬಂದ್ ಆಗಿದ್ದರೂ ಜನ ಅಡ್ಡಾಡುವುದನ್ನು ಕಂಡು ಪೊಲೀಸರಿಗೆ ಶಂಕೆ ಮೂಡಿತ್ತು.

ಆದರೆ, ಇದನ್ನು ಪತ್ತೆ ಹಚ್ಚುವುದು ಸಹ ಕಷ್ಟಕರವಾಗಿತ್ತು, ಆರೋಪಿ ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ, ಹಾಗೂ ಹೊಸಬರಿಗೆ ಕೊಡುತ್ತಿರಲಿಲ್ಲ, ಕೊನೆಗೆ ಉಪಾಯ ಮಾಡಿದ ಪೊಲೀಸರು ನಕಲಿ ಗ್ರಾಹಕರನ್ನು ಮಧ್ಯ ಕೊಳ್ಳಲು ಕಳುಹಿಸಿದರು.

ಆ ಮೂಲಕ ಸೆಕ್ಯೂರಿಟಿ ಗಾರ್ಡ್ ಸಿಬ್ಬಂದಿಯಿಂದ ಮದ್ಯ ಮಾರಾಟವನ್ನು ದೃಡಪಡಿಸಿ ಕೊಂಡ ಪೊಲೀಸರು ಆರೋಪಿ ಕೃಷ್ಣನನ್ನು ಬಂಧಿಸಿದ್ದಾರೆ. ಆರೋಪಿ ಕೃಷ್ಣನು ನಿಜವಾದ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ದಾಳಿಯಲ್ಲಿ ಪೊಲೀಸರು 220 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ, ಇದರಲ್ಲಿ ವೈನ್, ಬಿಯರ್, ಟಿನ್ಗಳು, ವಿವಿಧ ಬ್ರಾಂಡ್‌ಗಳ ಟೆಟ್ರಾ ಪ್ಯಾಕ್‌ಗಳು ಸೇರಿ ಸುಮಾರು 50,000 ರೂ. ಬೆಲೆ ಬಾಳುವ ಮದ್ಯ ವಶಕ್ಕೆ ಪಡೆದಿದ್ದಾರೆ.. ಘಟನೆಯ ಕುರಿತು ಪೊಲೀಸರು ಆರೋಪಿ ಸೇರಿದಂತೆ, ಬಾರ್ ಮಾಲೀಕ ಮತ್ತು ಕ್ಯಾಷರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile