ಕೆ.ಆರ್.ಪುರಂ ವಾಸಿಗಳು ಸೇರಿ, 4.66 ಲಕ್ಷ ಬೆಲೆಬಾಳುವ ಗಾಂಜಾ ವಶ

police have arrested three drug peddlers

ಕೆ.ಆರ್.ಪುರಂ ವಾಸಿಗಳು ಸೇರಿ, 4.66 ಲಕ್ಷ ಬೆಲೆಬಾಳುವ ಗಾಂಜಾ ವಶ

ವಿದ್ಯಾವಂತ ಯುವಕರು ದುಡ್ಡಿನ ಆಸೆಗಾಗಿ, ಗಾಂಜಾ ಮಾರಾಟಮಾಡಿ, ಬೇರೆ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದ್ದ ಮೂವರು ಗಾಂಜಾ ಮಾರಾಟದ ಆರೋಪದ ಮೇಲೆ ಪೊಲೀಸರ ಅಥಿತಿಗಳಾಗಿದ್ದಾರೆ.

ಸುದ್ದಗುಂಟೆ ಪಾಳ್ಯ ಪೊಲೀಸರು ಕೆ.ಆರ್.ಪುರಂ ವಾಸಿಗಳೂ ಸೇರಿ ಮೂವರನ್ನು ಬಂಧಿಸಿದ್ದಾರೆ, ಬಂಧಿತರಿಂದ 4.66 ಲಕ್ಷ ರೂಪಾಯಿ ಮೌಲ್ಯದ 23.3 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕೆ.ಆರ್ ಪುರಂ ನ ನಿವಾಸಿ ಶ್ಯಾಮದಾಸ್ (25), ಕೆ.ಆರ್. ಪುರಂ ನಿವಾಸಿ ಹರೀಶ್ ಕುಮಾರ್ (24) ಮತ್ತು ಕೇರಳ ಮೂಲದ ಬಿ ಟೆಕ್ ವಿದ್ಯಾರ್ಥಿ ಜಿಬಿನ್ ಜಾನ್ (21) ಎನ್ನಲಾಗಿದೆ. ಬಂಧಿತ ಮೂರೂ ಜನರು ವಿದ್ಯಾವಂತರಾಗಿದ್ದು, ಶೋಕಿ ಜೀವನಕ್ಕೆ ಮಾರುಹೋಗಿ ಅತಿ ಬೇಗನೆ ದುಡ್ಡು ಮಾಡುವ ಉದ್ದೇಶದಿಂದ ಈ ದಂದೆಗೆ ಇಳಿದಿದ್ದರು ಎಂದು ತಿಳಿದು ಬಂದಿದೆ.

ಕೆ.ಆರ್.ಪುರಂ ವಾಸಿಗಳು ಸೇರಿ, 4.66 ಲಕ್ಷ ಬೆಲೆಬಾಳುವ ಗಾಂಜಾ ವಶ - Kannada News

ಗಾಂಜಾವನ್ನು ಸುತ್ತಮುತ್ತಲ ಕೆಲವು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್ ವೇರ್ ಎಂಜಿನಿಯರ್ಗಳಿಗೆ ಮಾರಾಟ ಮಾಡುತ್ತಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಧ್ಯ ಸುದ್ದಗುಂಟೆ ಪಾಳ್ಯ ಪೊಲೀಸರು ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಜೊತೆಗೆ ಕೆ.ಜಿ ಗಟ್ಟಲೆ ಗಾಂಜಾವನ್ನು ಸಹ ವಶಕ್ಕೆ ಪಡೆದಿದ್ದಾರೆ. ವಿದ್ಯಾವಂತರಾದ ಇವರು ಈ ರೀತಿ ಗಾಂಜಾ ಮಾರಾಟದಲ್ಲಿ ತೊಡಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದು, ಮತ್ಯಾರು ಇಂತಹ ಕೃತ್ಯಕ್ಕೆ ಕೈ ಹಾಕದಿರುವ ಪಾಠ ಆಗಲಿ.  ////

Web Title : police have arrested three drug peddlers
(Kannada News Live @ kannadanews.today

Follow us On

FaceBook Google News

Read More News Today