ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಅರೆಸ್ಟ್

Police have arrested two Person for stealing a wine store

ಹೊಳೆಬೆನವಳ್ಳಿಯ ವೆಂಕಟೇಶ್ ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಕಳ್ಳರನ್ನ ಶಿವಮೊಗ್ಗ ಗ್ರಾಮಾಂತರ ಠಾಣೆಯವರು ಬಂಧಿಸಿ ಒಟ್ಟು 36 ಸಾವಿರಕ್ಕೂ ಅಧಿಕ ಮದ್ಯವನ್ನ ವಶಪಡೆಸಿಕೊಂಡಿದ್ದಾರೆ.

ಏ.16 ರಂದು ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ವೈನ್‌ ಸ್ಟೋರ್‌ ನಲ್ಲಿ  ಮದ್ಯದ ಬಾಟಲಿ ಹಾಗೂ ಪೌಚ್ ಗಳು ಕಳ್ಳತನವಾಗಿರುವ ಘಟನೆ ನಡೆದಿತ್ತು. ನೀಡಿದ ದೂರಿನ ಅನ್ವಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಪ್ರಕರಣದಲ್ಲಿ ಆರೋಪಿತರು ಹಾಗೂ ಕಳುವಾದ ಮದ್ಯದ ಪತ್ತೆ ಬಗ್ಗೆ ಶ್ರೀ ಉಮೇಶ್ ಈಶ್ವರ್ ನಾಯ್ಕ್, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ ಸಂಜೀವ್ ಕುಮಾರ್, ಶಿವಮೊಗ್ಗ ಗ್ರಾಮಾಂತರ ವೃತ್ತ ನಿರೀಕ್ಷಕರವರ ನೇತೃತ್ವದ, ಶ್ರೀ ಸುರೇಶ್‌ ಪೊಲೀಸ್ ಉಪ ನಿರೀಕ್ಷಕರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು.

ವೈನ್ ಸ್ಟೋರ್ ಗೆ ಕನ್ನ ಹಾಕಿದ ಇಬ್ಬರು ಅರೆಸ್ಟ್ - Kannada News

ಏ.18ರಂದು ಆರೋಪಿ ರಮೇಶ್‌ 22 ವರ್ಷ, ವಾಸ ಹಕ್ಕಿಪಿಕ್ಕಿ ಕ್ಯಾಂಪ್‌, ಹಸೂಡಿ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯದ ಮುಂದೆ ಹಾಜರ್‌ ಪಡಿಸಿದ್ದು, ಏ.19 ರಂದು ಆರೋಪಿ ಅಕ್ಬರ್‌ ಯಾನೆ ರವಿ ಯಾನೆ ಬೋಸ್ಲೆ ಯಾನೆ ಪಿನ್ನಂಡಿ (22) ದಸ್ತಗಿರಿ ಮಾಡಿದ್ದಾರೆ.

ಸದರಿ ಆರೋಪಿತರಿಂದ  ರೂ 10,430/- ಮೌಲ್ಯದ ಮದ್ಯದ ಬಾಟಲಿ ಹಾಗೂ ಪೌಚ್ ಗಳನ್ನು ಹಾಗೂ ರೂ 26,000/- ನಗದು ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಘನ ನ್ಯಾಯಾಲಯದ ಮುಂದೆ ಹಾಜರ್‌ ಪಡಿಸಲಾಗಿದೆ.

Follow us On

FaceBook Google News